*ಅಕ್ಷರ ಅರಳಿದ ವಿದ್ಯಾ ದೀಪ*
ಗೋಕಾಕ ನಾಡಿನ ಗಾನವಳಾಗಿ ಗಂಭೀರ ಕನಸನು ಹೊತ್ತವಳು,
ಸಾಹಿತ್ಯದ ಸುಗಂಧ ಹರಡಿ ಸಮಾಜದ ಹೃದಯವನು ತಟ್ಟುವಳು,
ಪೌರಸೇವೆಯ ಪಥದಲ್ಲಿಯೂ ಮನುಜ ಮೌಲ್ಯಗಳನು ಬಿತ್ತುವಳು
ವಿದ್ಯೆಯ ಬೆಳಕಿನ ವನಿತೆಯಾಗಿ ಕನ್ನಡ ತಾಯಿಯನು ಮೆಚ್ಚವಳು.
ಭಾವದ ಹಾದಿಯಲಿ ಬೆಳಕಾಗಿ ಬದುಕಿನ ಬಣ್ಣವನು ನೇಯುವಳು,
ಕವನದ ಕಣ್ಗಳಲಿ ಕಾಲದ ನೋವನು ಕರುಣೆಯಿಂದಲೇ ನೋಡುವಳು,
ಕ್ರಿಯಾಶೀಲ ಚಿಂತನೆಗಳಲಿ ಕನ್ನಡದ ಕಣ್ಮಣಿಯಾಗಿ ಬೆಳೆಯುವಳು
ಅಕ್ಷರ ಲೋಕದ ಅಂಗಳದಲಿ
ಆಶೆಯ ದೀಪವನು ಹಚ್ಚುವಳು.
ಮನದ ಮಾತಿನ ಮಂಜು ಕರಗಿ ಮೌಲ್ಯದ ಮುತ್ತನು ಚೆಲ್ಲುವಳು,
ಬರಹದ ಬಾಳಿಗೆ ಬೆನ್ನೆಲುಬಾಗಿ ಹೊಸ ಕನಸುಗಳನು ಬಿತ್ತುವಳು,
ವಿದ್ಯಾ ರೆಡ್ಡಿ ಹೆಸರೊಳು ಇಂದು ಸಾಹಿತ್ಯ ಸಾಗರವನು ತುಂಬುವಳು,
ಕನ್ನಡದ ಶ್ರೀಮಂತ ದಾರಿಯಲಿ ಕಾವ್ಯದ ಕಿರೀಟವನು ಧರಿಸುವಳು.
ಕವಿ:ಡಾ. ಜಯವೀರ ಎ.ಕೆ.
ಖೇಮಲಾಪುರ

.gif)

.gif)


0 Comments