*ಪ್ರಜ್ವಲ*
ಅಗ್ನಿವೀರ ಭಾರತ ಮಾತೆಯ
ಪ್ರೇಮ ಪುತ್ರ ಪ್ರಜ್ವಲ
ಸೂರ್ಯನಂತೆ ಜಗವ ಬೆಳಗಲಿ ll
ದುಷ್ಟ ಶಕ್ತಿಯ ಸಂಹರಿಸಿ
ಸೇಟೆದು ನಿಲ್ಲಲ್ಲಿ
ಭಾರತ ಮಾತೆಯ ಮಡಿಲಲಿ ll
ಮಾತೆ ರಕ್ಷಣೆ ಹೊತ್ತು
ಮುನ್ನುಗ್ಗಲಿ ದೇಶ ಸೇವೆಗೆ
ಶತ್ರುಗಳ ಸಂಹರಿಸುತ ನಿರಂತರ ll
ಚಳಿ ಮಳೆಗೆ ಅಂಜದೆ
ಹಿಂದುಸ್ತಾನ ಕಾಯುತ
ಶೌರ್ಯ ಪರಾಕ್ರಮಗಳ ಮೆರೆಯಲಿ ll
ಭರತ ಭೂಮಿಯ ಮಣ್ಣಿನ
ಶಕ್ತಿಯು ನೀನಾಗು ಕಂದ
ಜೈ ಜೈ ಜೈ ಭಾರತ ಎನ್ನುತ ನಡೆ ll
ಸೂರ್ಯನಂತೆ ಪ್ರಜ್ವಲಿಸಿ
ನಿತ್ಯ ಹೊಳೆಯುತ್ತಿರು
ದೇವಿಪ್ಯಮಾನವಾಗಿ ಭಾರತ ಮಣ್ಣಲ್ಲಿ
ಕವಿ:ಸಂಗಮೇಶ ನಾಯಿಕ
ಆರಕ್ಷಕ ಸಾಹಿತಿ, ಹಾರೂಗೇರಿ

.gif)

.gif)


0 Comments