*ನನ್ನರಸಿ*
ನಲ್ಲೆಯ ಸವಿಮಾತೆನಗೆ ಚೇತನ
ಅವಳಿರಲು ಬದುಕು ನಂದನ
ಸಂತಸ ನೀಡುವುದವಳ ನಯನ
ಹಾಲ್ಜೇನಂತೆ ನಮ್ಮಯ ಜೀವನ
ಮುದ್ದುಮೊಗದ ಚೆಲುವೆ ನನ್ನರಸಿ
ಬಯಸದೆ ಬಂದಿಹಳು ನನ್ನನರಸಿ
ಹೇಗಾಯಿತೋ ಪ್ರೇಮ ಅರಿಯೆನು
ಎಂದೆಂದಿಗು ಅವಳ ಮರೆಯೆನು
ಅವಳೆನ್ನ ಭರವಸೆಯ ಹೊಂಗಿರಣ
ಪುಟವಿಟ್ಟ ಚಿನ್ನದಂತಹ ನಲ್ಮೆ ಮನ
ಅಂತರಾಳದಿ ಕಂಡೆ ಪ್ರೇಮದ ಭಕ್ತಿ
ಅವಳೇ ನನ್ನ ಮನವನು ಸಳೆದ ಶಕ್ತಿ
ಅವಳ ಮಾತಲ್ಲೆ ಜಗವ ಮರೆತೆನು
ಮರೆಯಲಾರೆ ಪ್ರೀತಿಯ ಋಣವನು
ಬೆಳಕಾಯಿತು ಈ ಬಾಳು ಅವಳಿಂದ
ಉಸಿರ ಮಿಲನವು ಈ ಜನ್ಮ ಬಂಧ
*ಅಶೋಕ ಬೇಳಂಜೆ*

.gif)

.gif)


0 Comments