*ತವನಿಧಿ*
ನಗುವಿನ ಹೊನಲನು ಬೆಸೆದಿದೆ ಒಲುಮೆ
ಸಿಹಿ ಸ್ನೇಹಕೆ ಸೋತಿದೆ ಹೃದಯದ ಎಳಮೆ
ಖರೀದಿಸಲಾರೆ ಜಗದಲಿ ನಗುವಿನ ಖಜಾನೆ
ನೋಡಲೆ ದಿನವು ನಗು ಅರಳಿದ ಮುಂಜಾನೆ.......
ಪ್ರೀತಿ ತುಲಾಭಾರದಲಿ ಸೋತು ಕೂತಿರುವೆ
ತೂಗಿ ಏಳಿಸುವುದಾದರೆ ಪ್ರೀತಿಯ ಮಾಡುವೆ
ಬಾಳ ಬೇಗುದಿಗೆ ತವನಿಧಿಯಂತಹ ಕಣ್ಣಾಗು
ಎಲರ ತಂಪಲಿ ಘಮಿಸುವ ಹೂವಾಗು ಹಣ್ಣಾಗು.....
*ರೇಖಾ ವಿ ಕಂಪ್ಲಿ* ✍️

.gif)

.gif)


0 Comments