*ಭಕ್ತಿಯ ಬೇರು ಭಾವೈಕ್ಯತೆಯ ಹೂ*

 *ಭಕ್ತಿಯ ಬೇರು ಭಾವೈಕ್ಯತೆಯ ಹೂ* 


 ಕೃಷ್ಣೆ  ತೀರದೊಳು  ಖೇಮಲಾಪುರ ಸೊಬಗಿನ ಊರು,

ಕಬ್ಬಿನ ತೋಟದೊಳು  ಹಸಿರೆರೆದ ಪ್ರಕೃತಿ ನೂರು,

ರಸ್ತೆಯ ಇಕ್ಕೆಲದೊಳು ನಲಿವಿನ ಹಸಿರು ಜಾಲ,

ಕಣ್ಣಿಗೆ ಹಬ್ಬವಿದು, ಮನಕೆ ಮಧುರ ಕಂಗೊಳಾಲ.

ಅರಣ್ಯ ಸಿದ್ದೇಶ್ವರರ ಪವಾಡದ ಪುಣ್ಯಧಾಮ,

ಭಕ್ತರ ಕಾಮಧೇನು, ಭಂಡಾರದ ದಿವ್ಯನಾಮ,

ಶ್ರಾವಣ ಸೋಮವಾರ ಪಲ್ಲಕ್ಕಿಯ ವೈಭವ ರಂಗ,

ಅನ್ನದಾಸೋಹದೊಳು  ಅರಳುವುದು ಭಕ್ತಿಯ ಸಂಗ.

ಜೈನ ಬಸದಿ ನಿಂತಿದೆ ಇತಿಹಾಸದ ಸಾಕ್ಷಿಯಾಗಿ,

ಸಿದ್ದಾರೂಢ ಮಠ ಬೆಳಗುತ್ತದೆ ಧರ್ಮದ ದೀಪವಾಗಿ,

ಯಮನೂರಪ್ಪ ಉರುಸದೊಳು ಭಾವೈಕ್ಯದ ಹೂ ಅರಳುತ,

ಹಿಂದೂ–ಮುಸ್ಲಿಂ ಹೃದಯದೊಳು ಸೌಹಾರ್ದವೇ ಮೊಳೆಯುತ.

ಶಾಲೆಯ ಬೆಳಕಿನೊಳು ಬದುಕು ಕಂಡ ಅನೇಕ ಜೀವ,

ನಾಡು–ವಿದೇಶದೊಳು ಮೂಡಿದೆ ಸಾಧನೆಯ ಭವ್ಯ ತೀವ,

ಭಜನೆ–ಡೊಳ್ಳಿನ ನಾದದಿ ಜೀವಿಸುವ ಜನಮನ,

ಭಕ್ತಿಯ ಬೇರು ಭಾವೈಕ್ಯತೆಯ ಹೂ  ಕನ್ನಡದ ಹೆಮ್ಮೆಯ ಧನ.

  


ಕವಿ:ಡಾ. ಜಯವೀರ ಎ. ಕೆ.

     ಖೇಮಲಾಪುರ

Image Description

Post a Comment

0 Comments