ವಿದ್ಯಾರ್ಥಿಗಳು ನಿರಂತರ ಕಲಿಕೆಯಿಂದ ಮಾತ್ರ ಸಾಧನೆ ಸಾಧ್ಯ : ಸಾಹಿತಿ ಎಂಟೆತ್ತಿನವರ
ಬೇಡಕಿಹಾಳ: ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಕಲಿಕೆ ಅತ್ಯಂತ ಪ್ರಮುಖವಾಗಿದೆ. ಕಲಿಕೆ ನಿರಂತರವಾಗಿದ್ದರೆ ಯಶಸ್ಸು ಸಾಧ್ಯವಾಗುತ್ತದೆ. ಯಾವ ವಿದ್ಯಾರ್ಥಿ ಶ್ರಮಪಡದೆ ಅಭ್ಯಾಸ ಮಾಡದೆ ಕಲಿಕೆಯಲ್ಲಿ ಹಿಂದೆ ಉಳಿಯುತ್ತಾನೋ ಆತ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ. ಆದರೆ ನಿರಂತರವಾಗಿ ಕಲಿಕೆ ಸಾಧ್ಯವಾದರೆ ಯಶಸ್ಸು ಸಾಧ್ಯ ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯರು ಮತ್ತು ಸಾಹಿತಿಗಳಾದ ಡಾ.ಸುಬ್ರಾವ್ ಎಂಟೆತ್ತಿನವರ ತಿಳಿಸಿದರು.
ಮಂಗಳವಾರ ಬೇಡಕಿಹಾಳ ಲಠ್ಠೆ ಶಿಕ್ಷಣ ಸಂಸ್ಥೆಯ ಶ್ರೀಮತಿ ಕುಸುಮಾವತಿ ಮಿರಜಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕ್ರೀಡೆ ಮತ್ತು ಸಾಂಸ್ಕೃತಿಕ ಸಮಾರೋಪ ಸಮಾರಂಭ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೊಡಿಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯು ನಿರಂತರವಾಗಿ ಓದುತ್ತಾ ಹೋಗಬೇಕು. ಆಗ ಅವನ ಜೀವನದಲ್ಲಿ ಉತ್ತಮವಾದ ಯಶಸ್ಸಿನ ದಾರಿಗಳು ತೆರೆದುಕೊಳ್ಳುತ್ತವೆ. ಓದು ಓದು ಓದು ನಿನಗಿಷ್ಟವಾಗುವಾಗೆ ಓದು. ಆಗ ಬೇರೆಯವರು ನಿನ್ನನ್ನು ನೋಡಿ ಅಂಜಿಕೆಯಾಗುವಂತೆ ಓದು ಎಂದು ಅಂಬೇಡ್ಕರ್ ಅವರ ಶಾಲಾ ಶಿಕ್ಷಣದ ಅನುಭವಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಮಾರ್ಗದರ್ಶನ ಮಾಡಿದರು. ಯಾವುದೇ ಸಾಧನೆ ಹಿಂದೆ ನಿರಂತರವಾದ ಶ್ರಮವಿರುತ್ತದೆ. ಆಶ್ರಮದ ಹಿಂದೆ ಆಸಕ್ತಿ ಕಲಿಕೆ ಇದ್ದಾಗ ಮಾತ್ರ ಯಶಸ್ಸು ಸಾಧ್ಯ.
ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ತಂದೆ ತಾಯಿ ಎಷ್ಟು ಮುಖ್ಯ ಪಾತ್ರ ವಹಿಸುತ್ತಾರೆಯೋ ಅಷ್ಟೇ ಶಾಲೆ ಮತ್ತು ಕಾಲೇಜುಗಳಲ್ಲಿ ಪ್ರಾಧ್ಯಾಪಕರು ಸಹ ಪ್ರಮುಖ ಪಾತ್ರ ವಹಿಸುತ್ತಾರೆ. ಏಕೆಂದರೆ ಜೀವನದ ಬಹುಮುಖ್ಯ ಆಯಾಮಗಳನ್ನು ಮಾರ್ಗದರ್ಶನ ಮಾಡುವ ಕೆಲಸವನ್ನು ತರಗತಿಯ ಕೋಣೆ ಮತ್ತು ಹೊರಗಡೆ ತಿಳಿಸುತ್ತಾರೆ. ಇವರ ಅನುಭವಗಳನ್ನು ತಾವು ಪಡೆದುಕೊಂಡು ಉತ್ತಮ ರೀತಿಯಲ್ಲಿ ಜೀವನ ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿದ್ಯಾರ್ಥಿಗಳು ಕಾಲೇಜಿನಂತದಲ್ಲಿ ನೋಟ್ಸ್ ಮಾಡಿಕೊಳ್ಳುವುದರ ಮೂಲಕ ಬದುಕಿನ ಜೀವನದ ದಾರಿಗೆ ಉತ್ತಮ ಬುನಾದಿ ಹಾಕಿಕೊಳ್ಳಬೇಕು. ಮಾನವೀಯತೆ ಬಳಸಿಕೊಳ್ಳಬೇಕು. ಸಮಾಜಮುಖಿಯಾಗಿ ಚಿಂತನೆ ಮಾಡುವ ಆಲೋಚನೆ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಕಿರಣ್ ಬಿ ಚೌಗಲೆ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತನಾಡಿದರು. ಮೂರು ವರ್ಷದ ವಿದ್ಯಾರ್ಥಿ ಜೀವನದ ಅನುಭವಗಳನ್ನು ಸ್ನೇಹ ಪಾಟೀಲ್, ಋತುಜಾ ಖೋತ್ ಸಾಕ್ಷಿ ಹಿರೇಮಠ್, ಪೂಜಾ ಹಿರುವೆ ಭಾವನಾತ್ಮಕವಾಗಿ ಹಂಚಿಕೊಂಡರು.
ವೇದಿಕೆಯಲ್ಲಿ ಮಹಾವಿದ್ಯಾಲಯದ ಉಪಾಧ್ಯಕ್ಷರಾದ ಜಯಕುಮಾರ್ ಖೋತ್, ಟಿ.ಎಸ್ ಖೋತ್, ಬೆಡಗೆ, ಸಿರುಗುಪ್ಪೆ, ಬಿ.ಎಸ್.ಇಟ್ನಾಳ್, ಮಲ್ಲಿಕಾ, ಚೈತ್ರಾ, ವಿನಾಯಕ ಮಾದಿಗ, ಅರ್ಚನಾ ಚೌಗಲೆ,ಸುತಾರ್ ಉಪಸ್ಥಿತರಿದ್ದರು.
ನಿಶಾ ಖೋತ್ ಅವರಿಂದ ಪ್ರಾರ್ಥನೆ ಮಾಡಿದರು. ಹೊಂಬಯ್ಯ ಅತಿಥಿಗಳನ್ನು ಪರಿಚಯಿಸಿದರು. ಮಹದೇವ ಮೊಕಾಶಿ ವಾರ್ಷಿಕ ವರದಿ ಓದಿದರು. ಐದನೇ ಸೆಮಿಸ್ಟರ್ ನಲ್ಲಿ ನೂರಕ್ಕೆ ನೂರು ಅಂಕ ಪಡೆದ ಏಳು ವಿದ್ಯಾರ್ಥಿನಿಯರನ್ನು ಅಭಿನಂದಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಬಹುಮಾನ ವಿತರಣೆಯನ್ನು ದೀಪಕ್ ಬುರುಡ್ ನಡೆಸಿಕೊಟ್ಟರು. ಸ್ಪೂರ್ತಿ ಬಿಕ್ಕಣ್ಣನವರ್ ನಿರೂಪಿಸಿದರು. ಸ್ಪೂರ್ತಿ ಕಾಂಬಳೆ ವಂದಿಸಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವರದಿ : ಡಾ. ವಿಲಾಸ ಕಾಂಬಳೆ
ದೇಹ ದಾನಿಗಳ ಗ್ರಾಮ
ಶೇಗುಣಶಿ
ಮೋ: 9591782353

.gif)

.gif)


0 Comments