ಇಂದು ನಗರದಲ್ಲಿ ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದಿಂದ ಪತ್ರಿಕಾಗೋಷ್ಠಿ ಆಯೋಜನೆ

 ಇಂದು ನಗರದಲ್ಲಿ ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದಿಂದ ಪತ್ರಿಕಾಗೋಷ್ಠಿ ಆಯೋಜನೆ



ನ್ಯಾ.ನಾಗಮೋಹನ್ ದಾಸ್ ರವರ ಆಯೋಗದ ವರದಿ  ತಿರಸ್ಕರಿಸುವುದು: ಹಿಂದಿನ ವಿಶೇಷ ಸಚಿವ ಸಂಪುಟದ ನಿರ್ಣಯವನ್ನು ಮರುಪರಿಶೀಲಿಸುವುದು


ಬೆಂಗಳೂರು: ಏ.22: ನ್ಯಾ.ನಾಗಮೋಹನ್ ದಾಸ್ ರವರ ಆಯೋಗದ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುವುದು ಹಾಗೂ ದಿನಾಂಕ 18.08.2025ರ ವಿಶೇಷ ಸಚಿವ ಸಂಪುಟದ ನಿರ್ಣಯವನ್ನು ಮರುಪರಿಶೀಲಿಸಿ, ಸದರಿ ನಿರ್ಣಯವನ್ನು ಕೈಬಿಡುವ ಈ ವಿಷಯಗಳ ಬಗ್ಗೆ ಇಂದು ನಗರದಲ್ಲಿ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದಲ್ಲಿ ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ಅಧ್ಯಕ್ಷರಾದ ಬಹುಜನ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಇದೇ ಶುಕ್ರವಾರ ಬೆಳಗ್ಗೆ ದಿನಾಂಕ: 23.04.2026ರಂದು ಒಳಮೀಸಲಾತಿ ಕುರಿತು ವಿಶೇಷ ಸಚಿವ ಸಂಪುಟ ಸಭೆಯನ್ನು ಕರೆದಿದ್ದು, ಇದರ ಪೂರ್ವಭಾವಿ ಅಂಗವಾಗಿ ಈ ವಿಷಯವನ್ನು ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ವತಿಯಿಂದ ಬೆಂಗಳೂರು ನಗರದ ಪ್ರೆಸ್ ಕ್ಲಬ್ ನಲ್ಲಿ ಇಂದು ಮಧ್ಯಾಹ್ನ 1:30ಕ್ಕೆ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿದೆ.


ನಂತರ ಮಾತನಾಡಿದ ಅವರು ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಅವೈಜ್ಞಾನಿಕ ಮತ್ತು ಅಪೂರ್ಣವಾದ ದತ್ತಾಂಶ, ಆಯೋಗದಿಂದ ಸರ್ಕಾರದ ಆದೇಶದಲ್ಲಿ ನಿಗದಿಪಡಿಸಿದ ಷರತ್ತುಗಳ ಉಲ್ಲಂಘನೆ, ಉಪ ಜಾತಿಗಳ ಒಗೂಡಿಸದಿರುವುದು ಮತ್ತು ಮೂಲ ಜಾತಿಗಳನ್ನು ಕಂಡು ಹಿಡಿಯದೇ ಇರುವುದು, ಆಯೋಗವು ತನ್ನ ವ್ಯಾಪ್ತಿಯನ್ನು ಮೀರಿ ಶಿಫಾರಸು ಮಾಡಿದ್ದು, ಇನ್ನೂ ವೈಜ್ಞಾನಿಕ ಆಧಾರವಿಲ್ಲದೆ ತೆಗೆದುಕೊಂಡ ಸಂಪುಟ ನಿರ್ಣಯ, ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘನೆ ಮತ್ತು ರೋಸ್ಟರ್ ಬಿಂದುಗಳಲ್ಲಿ ಮೋಸ, ಅನ್ಯಾಯವನ್ನು ಸರಿಪಡಿಸಲು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.


ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ಅದ್ಯಕ್ಷರಾದ ಬಹುಜನ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ರಾಜ್ಯ ಸಂಚಾಲಕರಾದ ಸಿದ್ದಯ್ಯ ಐಎಎಸ್ (ನಿವೃತ್ತ), ಬಿಬಿಎಂಪಿಯ ಮಾಜಿ ಮಹಾಪೌರರಾದ ಶ್ರೀ ಸಂಪತ್ ರಾಜ್, ಮೈಸೂರಿನ ಮಾಜಿ ಮಹಾಪೌರರಾದ ಶ್ರೀ ಪುರುಷೋತ್ತಮ್, ಶ್ರೀಮತಿ ವಾಣಿ ಶಿವರಾಂ, ಎಸ್ಸಿ ಎಸ್ಟಿ ನೌಕರರ ಅದ್ಯಕ್ಷ ಶ್ರೀ ಡಿ. ಚಂದ್ರಶೇಖರಯ್ಯ, ಶ್ರೀ, ಟಿ.ಆರ್. ಶಿವರಾಮ್, ಶ್ರೀ ಪಟಾಪಟ್ ಶ್ರೀನಿವಾಸ, ಶ್ರೀ ರುದ್ರಮುನಿ, ಸೋಮಶೇಖರ್ ಬಣ್ಣದ ಮನೆ, ನಾಗೇಶರಾವ್, ಶಿವಣ್ಣ ಬಿ. ಕನಕಪುರ, ಅಪ್ಪೆಗೆರೆ ಪ್ರದೀಪ್, ಕೂಡ್ಲೂರು ಕಾಂತರಾಜ್, ಡಾ. ದೀಪಕ್ ಅಪ್ಪಾಜಿ, ಗೌರಿ ಶಂಕರ್, ಶಿವರಾಜ್ ಮಾಗಡಿ, ಡಾ. ಈಶ್ವರ್ ಸಿರಿಗೇರಿ ಮತ್ತು ವಿಭಾಗೀಯ ಸಂಚಾಲಕರುಗಳು ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಮತ್ತಿತರರು ಭಾಗವಹಿಸುವವರು.


ದಯವಿಟ್ಟು ತಾವುಗಳು ಪತ್ರಿಕಾಗೋಷ್ಠಿಯನ್ನು ಆಯೋಜಿಸಿರುವ ಅಂಗವಾಗಿ ನಮ್ಮ ವರದಿ, ಮನವಿಗಳನ್ನು, ಸಮಸ್ಯೆಗಳನ್ನು ಪರಿಹರಿಸಲು, ರಾಜ್ಯ ಸರ್ಕಾರಕ್ಕೆ ತಿಳಿಸಲು ತಾವು ದಯವಿಟ್ಟು ತಮ್ಮ ಮಾಧ್ಯಮದ ವರದಿಗಾರರು/ವಿದ್ಯುನ್ಮಾನ ವರದಿಗಾರರು ಮತ್ತು ಛಾಯಾಗ್ರಾಹಕರುಗಳನ್ನು ಕಳುಹಿಸಿಕೊಡಬೇಕಾಗಿ ವಿನಂತಿ.


     ತಮ್ಮ ವಿಶ್ವಾಸಿ

       ಅಧ್ಯಕ್ಷರು

(ಶ್ರೀ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ)

ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ

ಒಕ್ಕೂಟ, ಬೆಂಗಳೂರು

8748856056



ದಿನಾಂಕ: 22.04.2026

ಸ್ಥಳ: ಬೆಂಗಳೂರು

Image Description

Post a Comment

0 Comments