ದೇಶದ ಅಭಿವೃದ್ಧಿಗೆ ಜನಗಣತಿ ದಿಕ್ಸೂಚಿಯಂತೆ : ಸುರೇಶ್ ಮುಂಜೆ
ನಿಪ್ಪಾಣಿ: ಭಾರತ ದೇಶ ವಿವಿಧತೆಯಲ್ಲಿ ಏಕತೆ ರಾಷ್ಟ್ರ. ಈ ನಮ್ಮ ದೇಶ ಅಭಿವೃದ್ಧಿಯಲ್ಲಿ ಮತ್ತಷ್ಟು ಸಾಧಿಸಬೇಕಾದರೆ ಇಂದು ನಡೆಯುತ್ತಿರುವ ಜನಗಣತಿ ಅತಿಮುಖ್ಯ ಎಂದು ನಿಪ್ಪಾಣಿ ತಾಲೂಕಿನ ತಹಸಿಲ್ದಾರ್ ಸುರೇಶ್ ಮುಂಜೆ ತಿಳಿಸಿದರು.
ಜಿ ಆಯ್ ಬಾಗೇವಾಡಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಮೊದಲ ಹಂತದ ಗಣತಿದಾರರಿಗೆ ಮತ್ತು ಮೇಲ್ವಿಚಾರಕರ ತರಬೇತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರದ ಯೋಜನೆಗಳನ್ನು ರೂಪಿಸಲು ಜನಗಣತಿಯ ಕಾರ್ಯಯೋಜನೆ ಮುಖ್ಯವಾಗಿದೆ. ಇದಕ್ಕೆ ಗಣತಿಕಾರ್ಯಯರ ಕೆಲಸ ಮುಖ್ಯವಾಗಿದೆ. ಹಾಗಾಗಿ ನೀವುಗಳು ದೇಶದ ಅಭಿವೃದ್ಧಿಗೆ ಮುನ್ನುಡಿ ಬರೆಯುತ್ತಿರಿ ಎಂದು ತಿಳಿಸಿದರು.
ಭಾರತ ಜನಗಣತಿಯು ಅತ್ಯಂತ ಪವಿತ್ರ ಕಾರ್ಯವಾಗಿರುವಂತದ್ದು. ಸಾಮಾಜಿಕ ಅಭಿವೃದ್ಧಿ ಶೈಕ್ಷಣಿಕ ಅಭಿವೃದ್ಧಿ ಮತ್ತು ದೇಶದ ಅಭಿವೃದ್ಧಿ ಕಾರಣಕ್ಕಾಗಿ ನಾವು ಮತ್ತು ನೀವೆಲ್ಲರೂ ಹಣೆಯಾಗಬೇಕು ಎಂದು ತಿಳಿಸಿದರು. ಜೊತೆಗೆ ಗಣತಿದಾರರಲ್ಲಿ ಪ್ರಾಮಾಣಿಕ ಪ್ರಯತ್ನ ಹಾಗೂ ಪ್ರಾಮಾಣಿಕತೆ ಇರಬೇಕು. ಏಕೆಂದರೆ ಮುಂದಿನ ಯುವ ಪೀಳಿಗೆ ಅಭಿವೃದ್ಧಿಗೆ ನಾವು ಸಾಕ್ಷಿ ಪ್ರಜ್ಞೆ ಆಗಬೇಕೆಂದು ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ಕರೆ ನೀಡಿದರು. ಗೆಳತಿಯ ಕೆಲಸ ಪುಣ್ಯದ ಕೆಲಸ ಇದರಿಂದ ಮನೆ ಚಿತ್ರಣ ಮನೆಯ ಪ್ರೀತಿ ವಾತ್ಸಲ್ಯ ನೆರೆಹೊರೆಯವರ ಸಾಮಾಜಿಕ ಸ್ಥಿತಿ ಹಾಗೂ ಸಾಕ್ಷರತೆ ಪ್ರಮಾಣವನ್ನು ಅರಿಯಲು ಸಹಕಾರಿಯಾಗುತ್ತದೆ. ಇದರಿಂದ ದೇಶದ ಅಭಿವೃದ್ಧಿ ಮಟ್ಟವನ್ನು ತಿಳಿದುಕೊಳ್ಳಲು 2027 ಜನಗಣತಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ತರಬೇತಿಯನ್ನು ಉದ್ಘಾಟನೆ ಮಾಡಿದ ಜಿಐ ಬಾಗೇವಾಡಿಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಹುರುಳಿ ಅವರು ಮಾತನಾಡುತ್ತಾ ನಾನು ಸ್ವಯಂಗಣತಿ ಮೂಲಕ ಭಾರತದ ಜನಗಣತಿಗೆ ಇಂದು ಪ್ರಮುಖ ಪಾತ್ರವಹಿಸಿದ್ದೇನೆ. ಹಾಗಾಗಿ ನಾವು ನೀವೆಲ್ಲರೂ ಈ ಜನಗಣತಿಯಲ್ಲಿ ಪ್ರಾಮಾಣಿಕತೆಯಿಂದ ಭಾಗವಹಿಸಿ ದೇಶದ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸಬೇಕಾಗಿದೆ. ಜೊತೆಗೆ ಇಲ್ಲಿ ಸೇರಿರುವ ಗಣತಿದಾರರು ಮತ್ತು ಮೇಲ್ವಿಚಾರಕರು ಉತ್ತಮ ರೀತಿಯ ತರಬೇತಿಯನ್ನು ಪಡೆದು ಒಳ್ಳೆಯ ನೈಜ ದತ್ತಾಂಶವನ್ನು ಸಂಗ್ರಹಿಸಿ ನೀಡಬೇಕೆಂದು ತಿಳಿಸಿದರು.
ತರಬೇತಿಯಲ್ಲಿ ಪ್ರಸ್ತವಿಕ ಮಾತನಾಡಿದ ಬೋರಗಾವ್ ಮುಖ್ಯ ಅಧಿಕಾರಿಯಾದ ಎಸ್ ಬಿ ತೋಡಕರ್ ಮಾತನಾಡುತ್ತಾ ಭಾರತದ ಜನಸಂಖ್ಯೆಯ ಹಿನ್ನೆಲೆಯಲ್ಲಿ ಭಾರತ ಜನಗಣತಿಯು 16 ಬಾರಿ ನಡೆದಿದೆ. ಸ್ವತಂತ್ರ ಪೂರ್ವದಲ್ಲಿ ಎಂಟು ಬಾರಿ ಹಾಗೂ ಸ್ವಾತಂತ್ರ್ಯದ ನಂತರ ಎಂಟು ಬಾರಿ ಜನಗಣತಿ ನಡೆದಿದೆ. ಈಗ 15 ವರ್ಷದ ನಂತರ ಭಾರತದ ಜನಗಣತಿ ಕಾರ್ಯ ನಡೆಯುತ್ತಿರುವುದು ಒಂದು ಹೆಮ್ಮೆಯ ಸಂಗತಿ ಎಂದು ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಿಪ್ಪಾಣಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಯಾದ ಪ್ರವೀಣ್ ಕಟ್ಟಿ ಅವರು ಮಾತನಾಡುತ್ತ 1948ರ ಆಕ್ಟ್ ಪ್ರಕಾರ ಜನಗಣತಿಯು ನಡೆಯುತ್ತಿದೆ. ಇದು ಕಾನೂನಿನ ಮೂಲಕ ನಡೆಯುತ್ತಿರುವುದರಿಂದ ಪ್ರತಿಯೊಬ್ಬರು ತಮ್ಮ ಕರ್ತವ್ಯ ಪಾಲನೆಯನ್ನು ನಿಷ್ಠೆಯಿಂದ ನಿರ್ವಹಿಸಬೇಕು. ಇದರಿಂದ ದೇಶದ ಸರ್ವಾಂಗೀಣ ಪ್ರಗತಿಯ ಮುನ್ನೋಟ ದೊರೆಯಲಿದೆ ಎಂದು ತಿಳಿಸಿದರು.
ತರಬೇತಿಯಲ್ಲಿ ಉಪಸುತ ಇದ್ದ ನಿಪ್ಪಾಣಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹದೇವಿ ನಾಯಿಕ ಅವರು ಮಾತನಾಡುತ್ತಾ ಸರ್ಕಾರದ ಯಾವುದೇ ಯೋಜನೆಗಳಿಗೆ ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾದುದ್ದು. ಈಗಾಗಲೇ ಸರ್ಕಾರದಿಂದ ನಿಯೋಜಿಸಿದ ಎಲ್ಲಾ ಗಣತಿಗಳನ್ನು ನಮ್ಮ ಶಿಕ್ಷಕರು ನಿರ್ವಹಿಸಿದ್ದಾರೆ. ಅದೇ ರೀತಿ 2027ರ ಭಾರತೀಯ ಜನಗಣತಿಗೆ ನಮ್ಮ ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ತಿಳಿಸುತ್ತಾ ಶಿಕ್ಷಕರ ಕಾರ್ಯವೈಕರಿಯನ್ನು ಪ್ರಶಂಶಿಸಿದರು.
ನಾಡಗೀತೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೇದಿಕೆಯಲ್ಲಿದ್ದ ಎಲ್ಲ ಗಣ್ಯರನ್ನು ಮತ್ತು ಗೆಳತಿದಾರರು ಹಾಗೂ ಮೇಲ್ವಿಚಾರಕರನ್ನು ಕ್ಷೇತ್ರ ತರಬೇತಿದಾರರಾದ ಡಾ.ಹೊಂಬಯ್ಯ ಸ್ವಾಗತಿಸಿದರು. ಲಕ್ಷ್ಮಣ ಕೋನೆ ವಂದಿಸಿದರು. ಲಕ್ಷ್ಮಿ ದಿಗ್ಗೆವಾಡಿ ಸಂತೋಷ್ ಪಾಟೀಲ್, ರಮೇಶ್, ಅಜೀತ್, ಸಾಗರ್, ಜಿತೆಂದ್ರ, ಶಶಿಕಾಂತ್, ಕ್ಷೇತ್ರ ತರಬೇತಿದಾರರು ಹಾಗೂ ತಾಲೂಕು ಆಡಳಿತದ ಸಿಬ್ಬಂದಿ ನಗರಸಭೆಯ ಸಿಬ್ಬಂದಿ 250 ತರಬೇತಿದಾರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಪ್ರವೀಣ್ ಕಾಗೆಯವರು ನಿರೂಪಿಸಿದರು.
ವರದಿ : ಡಾ. ವಿಲಾಸ್ ಕಾಂಬಳೆ
ದೇಹ ದಾನಿಗಳ ಗ್ರಾಮ
ಶೇಗುಣಶಿ

.gif)

.gif)


0 Comments