ಡಾ.ಬಿ.ಆರ್.ಅಂಬೇಡ್ಕರ್ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ
ಚಿಕ್ಕೋಡಿ: ಸಂವಿಧಾನ ಶಿಲ್ಪಿ, ಕಾನೂನು ತಜ್ಞ, ಸಾಮಾಜಿಕ ಮತ್ತು ಶಿಕ್ಷಣ ಪ್ರೇಮಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135 ಜನ್ಮ ದಿನಾಚರಣೆಯ ಅಂಗವಾಗಿ 2027 ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಚಿಕ್ಕೋಡಿಯ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ (ಎ.ವಿ.ಎಸ್.ಎಸ್) ನಾಡಿನ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಈ ಪ್ರಶಸ್ತಿಗೆ ಕರ್ನಾಟಕ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಅಂಬೇಡ್ಕರ್ ಚಿಂತನೆ ಮತ್ತು ಬೌದ್ಧ ಧರ್ಮದ ಪ್ರಚಾರ ಮತ್ತು ತತ್ವಗಳ ಅನುಯಾಯಿಗಳು/ಶಿಕ್ಷಣ/ ಸಾಹಿತ್ಯ/ಸಂಘಟನೆ/ಸಂಗೀತ/ಕಲೆ/ಜಾನಪದ/ಸಾಮಾಜಿಕ ಚಳುವಳಿ/ಮಹಿಳಾ ವಿಮೋಚನಾ ಸಾಮಾಜಿಕ ಹೋರಾಟಗಾರರು/ದಲಿತ ಚಳುವಳಿಗಾರರು ಆಗಿರುವ ಸರ್ಕಾರಿ/ಅರೆ ಸರ್ಕಾರಿ/ಖಾಸಗಿ/ಸಾಮಾಜಿಕ ಹೋರಾಟಗಾರರು ತಮ್ಮ ಸಾಧನೆ ಚಟುವಟಿಕೆಗೆ ಸಂಬಂಧಿಸಿದ ಮಾಹಿತಿ ಹಾಗೂ ಸ್ವ ವಿವರದ ಪ್ರತಿಯನ್ನು ಅಂಚೆ/ಕೋರಿಯರ್ ಮೂಲಕ 20.04.2026ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕೆಂದು ತಿಳಿಸಲಾಗಿದೆ. ಈ ಮಿಂಚಂಚೆ ಗೆ. ಕಳಿಸಬಹುದು. avssbank.chikkodi@gmail.com ಎಂದು ಡಾ.ಬಿ.ಆರ್.ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ದಯಾನಂದ ಕಾಂಬಳೆ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಂಪರ್ಕಿಸಿ ಹೆಚ್ಚಿನ ಮಾಹಿತಿಗಾಗಿ:
ದಯಾನಂದ ಕಾಂಬಳೆ,
ಅಧ್ಯಕ್ಷರು, ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘ,
ಬಿ.ಕೆ.ಮಹಾವಿದ್ಯಾಲಯದ ಹತ್ತಿರ, ಚಿಕ್ಕೋಡಿ 591201, ಬೆಳಗಾವಿ ಜಿಲ್ಲೆ.
ಮೊ: 9008868718
ವರದಿ : ಡಾ. ವಿಲಾಸ ಕಾಂಬಳೆ
ಕನ್ನಡ ಉಪನ್ಯಾಸಕರು
ಹಾರೂಗೇರಿ

.gif)

.gif)


0 Comments