ಶರಣರು:ಅಂತರಂಗದ ಕೃಷಿ ಕುರಿತು* *ನಾಳೆ ವಿಶೇಷ ಉಪನ್ಯಾಸ*

 *ಶರಣರು:ಅಂತರಂಗದ ಕೃಷಿ ಕುರಿತು*

*ನಾಳೆ ವಿಶೇಷ ಉಪನ್ಯಾಸ*



ರಾಯಬಾಗ:ಪಟ್ಟಣದ ಹೊರ ವಲಯದ ನಾಗರಾಳ ರೋಡ ಪಕ್ಕದ ಡಾ. ಬಿ. ಎಂ. ಪಾಟೀಲ ಅವರ ಮಹಾಮನೆಯಲ್ಲಿ ಡಾ. ಫ. ಗು. ಹಳಕಟ್ಟಿ ರಾಷ್ಟ್ರೀಯ ಟ್ರಸ್ಟ್ (ರಿ) ಹಾಗೂ ಶರಣ ಚೇತನ ಬಳಗ ಇವುಗಳ ಸಹಯೋಗದಲ್ಲಿ ನಾಳೆ ದಿ 5 ರಂದು ಭಾನುವಾರ ಸಂಜೆ 5 ಗಂಟೆಗೆ "ಶರಣರು: ಅಂತರಂಗ ಕೃಷಿ ಕುರಿತು" ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ.


ಜಮಖಂಡಿಯ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಬಸವರಾಜ ಕಡ್ಡಿ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿಶೇಷ ಉಪನ್ಯಾಸ ನೀಡುವರು. ಸ್ಥಳೀಯ ಅನುಭಾವಿಗಳಾದ ಜಯಾನಂದ ಹಿರೇಮಠ ಅತಿಥಿಗಳಾಗಿ ಆಗಮಿಸುವರು. ಟ್ರಸ್ಟ್ ಅಧ್ಯಕ್ಷ ಡಾ. ಬಿ ಎಂ ಪಾಟೀಲ ಘನ ಅಧ್ಯಕ್ಷತೆ ವಹಿಸಿಕೊಳ್ಳುವರು ಎಂದು ಶರಣ ಚೇತನ ಬಳಗದ ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿರುವರು.


ವರದಿ:ಡಾ. ಜಯವೀರ ಎ.ಕೆ.

          ಖೇಮಲಾಪುರ

Image Description

Post a Comment

0 Comments