ನಾಳೆಯಿಂದ ಎಸ್.ಎಸ್.ಎಲ್. ಸಿ ಪರೀಕ್ಷೆ ಪ್ರಾರಂಭ : ಡಿಡಿಪಿಐ. ಆರ್. ಸೀತಾರಾಮು

 ನಾಳೆಯಿಂದ ಎಸ್.ಎಸ್.ಎಲ್. ಸಿ ಪರೀಕ್ಷೆ ಪ್ರಾರಂಭ : ಡಿಡಿಪಿಐ. ಆರ್. ಸೀತಾರಾಮು 



ಚಿಕ್ಕೋಡಿ: ಕರ್ನಾಟಕ ರಾಜ್ಯಾದ್ಯಂತ ಬುಧವಾರ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭವಾಗುತ್ತಿದ್ದು, ಅದರಂತೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿಯೂ ಶಾಂತಿಯುತ ಮತ್ತು ಸುರಕ್ಷಿತ ಎಸ್  ಎಸ್ ಎಲ್ ಸಿ ಪರೀಕ್ಷೆಯು ನಡೆಯುತ್ತಿದೆ ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕರಾದ ಆರ್ ಸೀತಾರಾಮು ಅವರು ಪತ್ರಿಯಾಗೋಷ್ಠಿಯಲ್ಲಿ ತಿಳಿಸಿದರು.


ಸೋಮವಾರ ತಮ್ಮ ಉಪ ನಿರ್ದೇಶಕರ ಕಚೇರಿಯಲ್ಲಿ ಪತ್ರಿಕೆ ಘೋಷ್ಠಿಯಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 18.03.2026ರಿಂದ 2.04.2026ರ ವರೆಗೆ ನಡೆಯುವ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಅನುಸರಿಸುವ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಕುರಿತು ಮಾಹಿತಿಯನ್ನು ಪತ್ರಕರ್ತರಿಗೆ ತಿಳಿಸಿದರು.


ವಿದ್ಯಾರ್ಥಿಗಳು ಸುರಕ್ಷಿತವಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವುದಕ್ಕಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಪ್ರಥಮ ಬಾರಿಗೆ ಎದರಿಸುತ್ತಿದ್ದಾರೆ. ಈ ದೃಷ್ಟಿಯಿಂದ ಶಾಂತಿಯುತ ಮತ್ತು ಸುರಕ್ಷಿತವಾಗಿ ನಡೆಸಲು ಅನುಕೂಲವಾಗುವ ದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ನಿಷೇಧಿಸಿದ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಜೊತೆಗೆ ಪರೀಕ್ಷಾ ಸಮಯದಲ್ಲಿ ಹತ್ತಿರದ ಜೆರಾಕ್ಸ್ ಕೇಂದ್ರಗಳನ್ನು ಮುಚ್ಚಿಸುವ ಕುರಿತು ತಿಳಿಸಲಾಗಿದೆ. ಪೊಲೀಸ್ ಬಂದೋಬಸ್ತ್ ಕೆಎಸ್ಆರ್ಟಿಸಿ ಹಾಗೂ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಪ್ರತಿದಿನವೂ ಪರೀಕ್ಷೆ ನಡೆಸಲು ಬಂದೋಬಸ್ತ್ ಮಾಡಲಾಗಿದೆ ಜೊತೆಗೆ ಎಲ್ಲಾ ಪಕ್ಷ ಕೇಂದ್ರಗಳಲ್ಲಿ ಮಧ್ಯಾಹ್ನದ ಉಪಹಾರ ಯೋಜನೆಯ ಅಡಿಯಲ್ಲಿ ಪರೀಕ್ಷೆಗೆ ಹಾಜರಾಗುವ ಮಕ್ಕಳಿಗೆ ಬಿಸಿಯುಟದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದು ತಿಳಿಸಿದರು.


2025-2026ನೇ ಸಾಲಿನಲ್ಲಿ ಒಟ್ಟು 621 ಪ್ರೌಢಶಾಲೆಗಳಿದ್ದು ಅದರಲ್ಲಿ 240 ಸರ್ಕಾರಿ 152 ಅನುದಾನಿತ 229 ಅನುದಾನ ರಹಿತ ಶಾಲೆಯ ಮಕ್ಕಳು ಪರೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಈ ಬಾರಿ ಒಟ್ಟು 45,598 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು ಅದರಲ್ಲಿ 24, 100 ಬಾಲಕರು 21,498 ಬಾಲಕಿಯರು ಪರೀಕ್ಷೆಯನ್ನು ಬರೆಯುತ್ತಿದ್ದಾರೆ.

ಈ ಎಲ್ಲ ವಿದ್ಯಾರ್ಥಿಗಳು ಸುಗಮವಾಗಿ ಪರೀಕ್ಷೆಯನ್ನು ಬರೆಯಬೇಕೆಂಬ ಉದ್ದೇಶದಿಂದ 3402 ಸಿಬ್ಬಂದಿ ವರ್ಗಗಳನ್ನು ಪರಿಕ್ಷಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 131 ಪರೀಕ್ಷೆಗಳಲ್ಲಿ ಸಿಸಿಟಿವಿ ಮತ್ತು ರೆಡ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಯ ಸುಗಮ ನಿರ್ವಹಣೆಗೆ ಒಟ್ಟು 131 ಮುಖ್ಯ ಅಧೀಕ್ಷಕರು 65 ಉಪ ಅಧೀಕ್ಷಕರು 131 ಸ್ಥಾನವಿಕ ಜಾಗೃತ ದಳ ಸಂಖ್ಯೆ ಹಾಗೂ ತಾಲೂಕು ಹಂತದ ಸ್ಕಾಡ ತಂಡ 24 ವೆಬ್ಕಾಸ್ಟಿಂಗ್ ಬೇಸಿಕ್ ವೀಕ್ಷಕರು 23 ಜಿಲ್ಲಾಅಂತ ತನಿಖಾ ದಂಡ 4 ಹಾಗೂ 2134 ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸಲಿವೆ ಎಂದು ವಿವರವಾಗಿ ಮಾಹಿತಿ ನೀಡಿದ್ದರು. 

ಶೈಕ್ಷಣಿಕ ಜಿಲ್ಲೆ ನಡೆಯುವ ಪರೀಕ್ಷೆಗೆ ಕೆ ಎಸ್ ಆರ್ ಟಿ ಸಿ ಮತ್ತು ಪೊಲೀಸ್ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು 24*7 ಕಾರ್ಯವನ್ನು ನಿರ್ವಹಿಸಿದ್ದಾರೆ. ಇವರೆಲ್ಲರ ಪರಿಶ್ರಮದಿಂದ ಹಾಗೂ ನಮ್ಮ ಶೈಕ್ಷಣಿಕ ಜಿಲ್ಲೆಯ ಶಿಕ್ಷಕರ ಮತ್ತು ಪೋಷಕರ ಪರಿಶ್ರಮದಿಂದ ಕಳೆದ ಬಾರಿ 26ನೇ ಸ್ಥಾನದಲ್ಲಿ ಇದ್ದ ನಮ್ಮ ಫಲಿತಾಂಶ ಈ ಬಾರಿ 10 ಒಳಗಡೆ ಬರುತ್ತದೆ ಎಂದು ನಿರೀಕ್ಷೆ ಇದೆ ಎಂದು ತಿಳಿಸಿದರು. 625ಕ್ಕೆ 625 ಪಡೆಯುವ ವಿದ್ಯಾರ್ಥಿಗಳು ಈ ಬಾರಿ ನಮ್ಮ ಶೈಕ್ಷಣಿಕ ಜಿಲ್ಲೆಯಲ್ಲಿ ಓದುವ ಮನೆಯ ಪ್ರೇರಣೆಯಿಂದ ಫಲಿತಾಂಶ ಬರಲಿದೆ. ಜೊತೆಗೆ ಪೂರ್ವಭಾವಿ ಪರೀಕ್ಷೆಯಲ್ಲಿ ಅಂತಂತವಾಗಿ ಫಲಿತಾಂಶವು ಸುಧಾರಣೆಗೊಂಡ ಕಾರಣದಿಂದ ಈ ಬಾರಿ ನಮ್ಮ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶವನ್ನು ನಿರೀಕ್ಷೆ ಮಾಡುತಿದ್ದೇವೆ ಎಂದು ಪತ್ರಕರ್ತರಿಗೆ ತಿಳಿಸಿದರು. 


ಪತ್ರಿಕೆಗೋಷ್ಠಿಯಲ್ಲಿ ಡಯಟಿನ ಪ್ರಾಂಶುಪಾಲರು ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯ ಜಿಲ್ಲಾ ನೋಡಲ್ ಅಧಿಕಾರಿಯಾದ ಖಾಡೆ ಅವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ ಪಡೆದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಸಂಯುಕ್ತ ಕರ್ನಾಟಕದ ವರದಿಗಾರರಾದ ಸಂಜಯ್ ಕಾಂಬಳೆ ಅವರಿಗೆ ಸನ್ಮಾನ ಮಾಡಿ ಅಭಿನಂದಿಸಲಾಯಿತು.


ವರದಿ: ಡಾ. ವಿಲಾಸ್ ಕಾಂಬಳೆ 

ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments