ನಿಪ್ಪಾಣಿಯಲ್ಲಿ ಪ್ರಥಮ ಹಂತದ ಜನಗಣತಿ 2027ರ ತರಬೇತಿ ಯಶಸ್ವಿ
.
ನಿಪ್ಪಾಣಿ: ಭಾರತ ದೇಶದಲ್ಲಿ ಏಪ್ರಿಲ್ 16ರಿಂದ ಮೇ 15ರ ವರಗೆ ನಡೆಯುತ್ತಿರುವ ಜನಗಣತಿ 2027ರ ತರಬೇತಿ ಅಂಗವಾಗಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ಮೊದಲ ಹಂತದ ತರಬೇತಿಯನ್ನು ಯಶಸ್ವಿಯಾಗಿ ನಡೆಯಿತು ಎಂದು ನಿಪ್ಪಾಣಿ ತಾಲೂಕಿನ ತಹಸಿಲ್ದಾರ್ ಸುರೇಶ್ ಮುಂಜೆ ತಿಳಿಸಿದರು
ಶನಿವಾರ ಕೆಎಲ್ಇ ಸಂಸ್ಥೆಯ ಜಿ ಆಯ್ ಬಾಗೇವಾಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಮೊದಲ ಹಂತದ ಗಣತಿದಾರರಿಗೆ ತರಬೇತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ನಿಪ್ಪಾಣಿ ತಾಲೂಕಿನ ಶಿಕ್ಷಕರಾದ ನೀವುಗಳು ದೇಶದ ಅಭಿವೃದ್ಧಿಗೆ ಮುನ್ನುಡಿ ಬರೆಯುತ್ತಿರಿ. ಮೊದಲ ದಿನಕ್ಕೂ ಮೂರನೇ ದಿನಕ್ಕೂ ನಿಮ್ಮಲ್ಲಿ ಅಪಾರವಾದ ಬದಲಾವಣೆ ಕಂಡು ಬಂದಿದೆ. ಏಕೆಂದರೆ ನಮ್ಮ ಮಾಸ್ಟರ್ ತರಬೇತಿ ದಾರರು ನಿಮಗೆ ಜನಗಣತಿಯ ಪ್ರಮುಖವಾದ ಅಂಶಗಳನ್ನು ತಿಳಿಸಿದ್ದಾರೆ. ನೀವು ಜನಗಣತಿಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತೀರಿ ಎಂದು ಭಾವಿಸುತ್ತೇನೆ. ಇದರೊಂದಿಗೆ ಗಣತಿದಾರರು ಮತ್ತು ಮೇಲ್ವಿಚಾರಕರು ಎತ್ತಿದ ಸಂದೇಹದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಶುಭ ಹಾರೈಸಿದರು.
ತರಬೇತಿಯಲ್ಲಿ ಭಾಗವಹಿಸಿದ ಇಬ್ಬರು ತರಬೇತಿಯನ್ನು ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ತರಬೇತಿದಾರರಾದ ಡಾ.ಹೊಂಬಯ್ಯ ಹೊನ್ನಲಗೆರೆ ಚುನಾವಣಾ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಹತ್ತು ಜನ ಕ್ಷೇತ್ರ ತರಬೇತಿದ್ದರು ಹಾಗೂ 250 ಗಣತಿದಾರರು ಮತ್ತು ಮೇಲ್ವಿಚಾರಕರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ನಗರ ಪಾಲಿಕೆಯ ಆಯುಕ್ತರು, ಹಾಗೂ ತಾಲೂಕು ಆಡಳಿತ, ನಗರಸಭೆ ಆಡಳಿತ ಮತ್ತು ಪುರಸಭೆ ಆಡಳಿತದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ : ಡಾ. ವಿಲಾಸ ಕಾಂಬಳೆ
ದೇಹ ದಾನಿಗಳ ಗ್ರಾಮ
ಶೇಗುಣಶಿ
ಮೋ:9591782353

.gif)

.gif)


0 Comments