ಅನನ್ಯ10ರ ವಸಂತಕ್ಕೆ ನಾಡಿನ ಗಣ್ಯರಿಂದ ಶುಭಾಶಯ
ಅತಿ ಶೀಘ್ರದಲ್ಲೇ ದಶಕದ ಸಂಭ್ರಮ ಮತ್ತು ಅನನ್ಯ ಕನ್ನಡ ಕಾರ್ಯಕ್ರಮದಲ್ಲಿ ಸಾಧನೆಗೈದ ಕಲಿಕಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜನೆ: ಕಾರ್ಯದರ್ಶಿ ರಾಜೇಶ್ ರಾಂಪುರ
ಮಂಡ್ಯ: ಏ.24: ರಾಜ್ಯ ಕಂಡ ಅತ್ಯುತ್ತಮ ಸಂಸ್ಥೆಗಳಲ್ಲಿ ಒಂದಾದ ಅನನ್ಯ ಕ್ರಿಯೇಷನ್ಸ್ ದೇಸಿ ಬೆಳ್ಳಿತೆರೆ ಮತ್ತು ಮಾಧ್ಯಮ ತರಬೇತಿ ಸಂಸ್ಥೆಯ ತನ್ನ ಹತ್ತು ದಶಕವನ್ನು ಪೂರೈಸಿ 11ರ ವಸಂತಕ್ಕೆ ಕಾಲಿಡುತ್ತಿದೆ.
ಅನನ್ಯ ಕ್ರಿಯೇಷನ್ಸ್ ದೇಶಿ ಬೆಳ್ಳಿತೆರೆ ಮತ್ತು ಮಾಧ್ಯಮ ತರಬೇತಿ ಸಂಸ್ಥೆಯಲ್ಲಿ ಭಗವಾನ್ ಗೌತಮ ಬುದ್ಧ, ಬಸವೇಶ್ವರ, ಬಾಬಾಸಾಹೇಬ್ ಡಾ. ಬಿ.ಅರ್. ಅಂಬೇಡ್ಕರ್ ಹಾಗೂ ಕುದ್ಮುಲ್ ರಂಗರಾವ್ ಇವರುಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸರಳವಾದ ಕಾರ್ಯಕ್ರಮಕ್ಕೆ ಅನನ್ಯ ಕ್ರಿಯೇಷನ್ಸ್ ದೇಸಿ ಬೆಳ್ಳಿತೆರೆ ಮತ್ತು ಮಾಧ್ಯಮ ತರಬೇತಿ ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಶ್ರೀ ರಾಜೇಶ್ ರಾಂಪುರ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅನನ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಜೇಶ್ ರಾಂಪುರ ಅವರು ಮಂಡ್ಯ ನಗದಲ್ಲಿ ಕಳೆದ ಹತ್ತು ವರ್ಷಗಳನ್ನು ಪೂರೈಸಿ ಪ್ರಸ್ತುತ 11 ವರ್ಷಕ್ಕೆ ಹೆಜ್ಜೆ ಇಡುತ್ತಾ ಸಾಗುತ್ತಿರುವುದು ನಮ್ಮೆಲ್ಲರನ್ನು ಇನ್ನಷ್ಟು ಹೊಸತನವನ್ನು ಹಾಗೂ ನಮ್ಮ ಸಂಸ್ಥೆಯಲ್ಲಿ ತಯಾರಾದ ಹಲವಾರು ಪ್ರತಿಭಾವಂತ ಪ್ರತಿಭೆಗಳು ಪ್ರಸ್ತುತ ದಿನಗಳಲ್ಲಿ ಹೊಸ ಮೈಲುಗಲ್ಲು ಸಾಹಸಕ್ಕೆ ಸಾಕ್ಷಿಯಾಗಿದ್ದಾರೆ ಎಂದು ಹೇಳಿದರು.
ಪ್ರಮುಖವಾಗಿ ಅನನ್ಯ ದಶಕದ ಸಂಭ್ರಮಕ್ಕೆ ನಾಡಿನ ಹೆಸರಾಂತ ದಿಗ್ವಿಜರಾದ ನಾಡ ದೇಸಿ ದೊರೆ ಡಾ. ಹಂಸಲೇಖ ಅವರು, ಉರುಲಿಂಗಪೆದ್ದಿ ಮಠದ ಬಹುಜನ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ, ಶ್ರೀ ಬಸವನಾಗಿ ದೇವ ಸ್ವಾಮೀಜಿ,
ಡಾ.ಬಿ.ಅರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಎಸ್.ಎಂ. ಬಸವರಾಜ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ಹಾಗೂ
ಬಂಡಾಯ ಸಾಹಿತಿ, ಸಂಸ್ಕೃತಿ ಚಿಂತಕ, ಚಿಂತಕ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್, ಚಿಂತಕ ಕೆ.ವೈ. ನಾರಾಯಣಸ್ವಾಮಿ, ನಾಡಿನ ಪ್ರಗತಿಪರರು, ಮಾಧ್ಯಮದ ವೃತ್ತಿಪರರು, ಮತ್ತಿತರರು ಅನನ್ಯ11ರ ವಸಂತಕ್ಕೆ ಪಯಣ ಬೆಳೆಸಿದ ಗಣ್ಯರಿಂದ ಶುಭಾಶಯ ಕೋರಿದರು.
* ಸಂಶೋಧನಾ ಮತ್ತು ಮಾಧ್ಯಮಗಳಲ್ಲಿ ಅನನ್ಯದ ಬೆಳಕು:
ನಮ್ಮ ಅನನ್ಯ ಸಂಸ್ಥೆಯಲ್ಲಿ ಪ್ರಪ್ರಥಮ ಬಾರಿಗೆ ತರಬೇತಿ ಪಡೆದು ಪತ್ರಿಕಾ ರಂಗವನ್ನು ಪ್ರವೇಶಿಸಿದ ಕೆಲ ವರ್ಷಗಳ ವರೆಗೂ ಸೇವೆ ಸಲ್ಲಿಸಿದ ನಂತರದಲ್ಲಿ ಪುನಃ
ಸಂಶೋಧನಾ ಕ್ಷೇತ್ರಕ್ಕೆ ಪ್ರವೇಶಿಸಿ ರಾಷ್ಟ್ರ ಕಂಡ ದೇಸಿ ದೊರೆ, ನಾಡಿನ ಒಂದೇ ಒಂದು ಭಾಷೆಯಲ್ಲಿ ಸಂಗೀತ ನಿರ್ದೇಶನ ನೀಡಿದ ಹೆಮ್ಮೆಯ ಸಂಗೀತ ದಿಗ್ಗಜ, ಸಾರಥಿ ಶ್ರೀ ಡಾ. ಹಂಸಲೇಖ ರವರ ಕುರಿತಂತೆ ಸಂಶೋಧನಾ ಮಾಡಿ ಮಹಾಪ್ರಬಂಧವನ್ನೇ (ಪಿಎಚ್.ಡಿ) ಪೂರ್ಣಗೊಳಿಸಿ ಡಾಕ್ಟರೇಟ್ ಪದವಿ ಪಡೆದ (ಡಾ. ಈಶ್ವರ್ ಸಿರಿಗೇರಿ)
ನಮ್ಮ ಸಂಸ್ಥೆಯ ಮೇರು ಶಿಖರ ಇದ್ದಂತೆ ಎಂದು ಅಭಿಪ್ರಾಯಪಟ್ಟರು.
ನಂತರ ಮಾತನಾಡಿದ ಅನನ್ಯ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ರಂಜಿತಾ ರಾಜೇಶ್ ರಾಂಪುರ ಅವರು ರಾಜ್ಯದ ನಾನಾ ಮಾಧ್ಯಮ ಹಾಗೂ ಪಿಅರ್ ಒ ಕೆಲಸದಲ್ಲಿ ಮನೋಜ್ ತಟ್ಟೆಹಳ್ಳಿ ಹಾಗೂ ನಾಡಿನ ದಿನ ಪತ್ರಿಕೆಗಳಲ್ಲಿ, ಪ್ರತಿಷ್ಠಿತ ಸುದ್ದಿ ಮಾಧ್ಯಮಗಳಾದ ಪ್ರಮುಖವಾಗಿ ನ್ಯೂಸ್18 ಕನ್ನಡ ಬೀದರ್ ಜಿಲ್ಲಾ ವರದಿಗಾರ ದುರುಗಪ್ಪ ಹೊಸಮನಿ, ಮಂಡ್ಯ ಜಿಲ್ಲೆಯ ಪತ್ರಕರ್ತರಾಗಿ ಶ್ರೀನಿವಾಸ್, ನಿರಂಜನ್, ರಾಯಚೂರ ಜಿಲ್ಲೆಯ ಲಿಂಗಸೂಗರು ತಾಲೂಕು ವರದಿಗಾರ ಚನ್ನಬಸಪ್ಪ, ದೇವದುರ್ಗ ತಾಲೂಕಿನ ವರದಿಗಾರ ಮಹಾಲಿಂಗ ದೊಡ್ಡಮನಿ, ಹಾಸನ ಜಿಲ್ಲೆಯ ನಿವಾಸಿ ಗಿರೀಶ್ ಸಂಪಾದಕತ್ವದಲ್ಲಿ 'ಭೀಮ ಸ್ಪೂರ್ತಿ' ದಿನಪತ್ರಿಕೆ ಮಾಲೀಕರಾಗಿದ್ದಾರೆ ಎಂದರು.
* ಸರ್ಕಾರದ ಮಟ್ಟದಲ್ಲಿ ಸೇವೆಗೆ ಅನನ್ಯ ಸಾಕ್ಷಿ:
ಪ್ರಸ್ತುತ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಬಳಿ ಮುಖ್ಯ ಛಾಯಾಗ್ರಾಹಕರಾಗಿ ಸುಮಂತ್, ಇನ್ನುಳಿದವರು ರಾಜ್ಯದಲ್ಲಿರುವ ಹಾಲಿ-ಮಾಜಿ ಶಾಸಕರು, ಮಾಜಿ ಸಚಿವರು ಬಳಿ ಮಾಧ್ಯಮ ಸಂಯೋಜಕರಾಗಿ, ಪಿಅರ್ ಒ ಕರ್ತವ್ಯವನ್ನು ನಿರ್ವಹಿಸುತ್ತಾ ತಮ್ಮ ವೃತ್ತಿಪರರಾಗಿ ಮುನ್ನಡೆಸುತ್ತಿದ್ದಾರೆ.
ಹಾಗೆಯೇ ಬಳ್ಳಾರಿ ಜಿಲ್ಲೆಯಲ್ಲಿ ಪತ್ರಿಕಾ ಮಾಧ್ಯಗಳಲ್ಲಿ ಅಮರೇಶ್ ಸಿರಿಗೇರಿ (ಕಸ್ತೂರಿ ಸುದ್ದಿ ಮಾಧ್ಯಮ), ಮಸ್ಕಿ ತಾಲೂಕಿನ ಅಮರೇಶ್ ಸಿ.ಎಂ, ನಿಂಗರಾಜ್, ಶಿವರಾಮ್ ಮುಂತಾದ ಹಲವಾರು ನಮ್ಮ ಪ್ರತಿಭೆಗಳನ್ನು ನಮ್ಮ ಅನನ್ಯ ಸಂಸ್ಥೆಯಲ್ಲಿ ಅವಕಾಶ ಮಾಡಿಕೊಟ್ಟಿದ್ದು ಹೆಮ್ಮರವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೊನೆಯಲ್ಲಿ ನಿಮ್ಮೆಲ್ಲರ ಹಾರೈಕೆ ಆಶೀರ್ವಾದ ಸಲಹೆ ಮತ್ತು ಮಾರ್ಗದರ್ಶನ ಸದಾಕಾಲವೂ ನಮ್ಮ ಅನನ್ಯ ಸಂಸ್ಥೆಗೆ ಹೀಗೆ ಮುಂದುವರಿಯಲಿ.
ಇದೇ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ರಂಜಿತ ರಾಜೇಶ್ ರಾಂಪುರ, ಗೋಪಾಲಕೃಷ್ಣ, ಜಯಸುಧಾ, ಪಂಕಜ ಮಂಡ್ಯ, ಪ್ರಶೀಲ ಮಂಡ್ಯ, ಲೀಲಾವತಿ ಕೆ. ಆರ್.ಪೇಟೆ, ಶ್ವೇತಾ ಕೊತತ್ತಿ ಮತ್ತಿತರರು ಉಪಸ್ಥಿತರಿದ್ದರು.
ಫೋಟೋ ಕ್ಯಾಪ್ಷನ್:
ಮಂಡ್ಯ ನಗರದ ಅನನ್ಯ ಕ್ರಿಯೇಷನ್ಸ್ ದೇಶಿ ಬೆಳ್ಳಿತೆರೆ ಮತ್ತು ಮಾಧ್ಯಮ ತರಬೇತಿ ಸಂಸ್ಥೆಯಲ್ಲಿ ಭಗವಾನ್ ಗೌತಮ ಬುದ್ಧ, ಬಸವೇಶ್ವರ, ಬಾಬಾಸಾಹೇಬ್ ಡಾ. ಬಿ.ಅರ್. ಅಂಬೇಡ್ಕರ್ ಹಾಗೂ ಕುದ್ಮುಲ್ ರಂಗರಾವ್ ಇವರುಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕೋಟ್:
ಮಂಡ್ಯ ನಗದಲ್ಲಿ ಕಳೆದ ಹತ್ತು ವರ್ಷಗಳನ್ನು ಪೂರೈಸಿ ಪ್ರಸ್ತುತ 11 ವರ್ಷಕ್ಕೆ ಹೆಜ್ಜೆ ಇಡುತ್ತಾ ಸಾಗುತ್ತಿರುವುದು ನಮ್ಮೆಲ್ಲರನ್ನು ಇನ್ನಷ್ಟು ಹೊಸತನವನ್ನು ನಮ್ಮ ಸಂಸ್ಥೆಯಲ್ಲಿ ತಯಾರಾದ ಹಲವಾರು ಪ್ರತಿಭಾವಂತ ಪ್ರತಿಭೆಗಳು ಪ್ರಸ್ತುತ ದಿನಗಳಲ್ಲಿ ಹೊಸ ಮೈಲುಗಲ್ಲು ಸಾಹಸಕ್ಕೆ ಸಾಕ್ಷಿಯಾಗಿದ್ದಾರೆ.
- ಶ್ರೀ ರಾಜೇಶ್ ರಾಂಪುರ, ಪ್ರದಾನ ಕಾರ್ಯದರ್ಶಿ, ಅನನ್ಯ ಕ್ರಿಯೇಷನ್ಸ್ ದೇಶಿ ಬೆಳ್ಳಿತೆರೆ ಮತ್ತು ಮಾಧ್ಯಮ ತರಬೇತಿ ಸಂಸ್ಥೆ ಮಂಡ್ಯ.
ಬಾಕ್ಸ್1:
ನಮ್ಮ ಅನನ್ಯ ಸಂಸ್ಥೆಯಲ್ಲಿ ಪ್ರಪ್ರಥಮ ಬಾರಿಗೆ ತರಬೇತಿ ಪಡೆದು ಪತ್ರಿಕಾ ರಂಗವನ್ನು ಪ್ರವೇಶಿಸಿದ ಕೆಲ ವರ್ಷಗಳ ವರೆಗೂ ಸೇವೆ ಸಲ್ಲಿಸಿದ ಮೇಲೂ ಸಂಶೋಧನಾ ಕ್ಷೇತ್ರಕ್ಕೆ ಪ್ರವೇಶಿಸಿ ಡಾಕ್ಟರೇಟ್ ಪದವಿ ಹಾಗೂ ರಾಜ್ಯದ ನಾನಾ ಮಾಧ್ಯಮಗಳಲ್ಲಿ ಸಾಧಕರನ್ನು ಪಡೆದ ಹೆಮ್ಮೆಯ ಅನನ್ಯ ಪ್ರತಿಭೆ ನಮ್ಮದು.
ಬಾಕ್ಸ್2:
ಅನನ್ಯ ಸಂಸ್ಥೆಯಲ್ಲಿ ಕಲಿಕಾರ್ಥಿಯಾಗಿ ಅಪ್ರತಿಮ ಸೇವೆ ಸಲ್ಲಿಸಿದ ನಾನಾ ಮಾಧ್ಯಮಗಳಲ್ಲಿ ಮಾಡಬಹುದಾದ ಹಲವು ಬಗೆಯಲ್ಲಿ ವೃತ್ತಿಪರತೆಯ ಮೈಗೂಡಿಸಿಕೊಂಡು ಸ್ವತಂತ್ರವಾಗಿ
ಬದುಕು ಕಟ್ಟಿಕೊಂಡಿರುವ ಎಲ್ಲಾ ಸಾಧಗೈದ ಕಲಿಕಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅದಷ್ಟು ಶೀಘ್ರದಲ್ಲೇ ದಶಕದ ಸಂಭ್ರಮದ ಕಾರ್ಯಕ್ರಮವನ್ನು ಅನನ್ಯ ಸಂಸ್ಥೆಯ ವತಿಯಿಂದ ಆಯೋಜಿಸಲಾಗುವುದು.
ವರದಿ : ಡಾ. ವಿಲಾಸ ಕಾಂಬಳೆ
ದೇಹ ದಾನಿಗಳ ಗ್ರಾಮ
ಶೇಗುಣಶಿ
ಮೋ: 9591782353



.gif)

.gif)


0 Comments