ಒಂದು ದಿನದ ಎಐ ನಿಮ್ಮ ಕೈಯಲ್ಲಿ ಪ್ರಾಯೋಗಿಕ ಕಾರ್ಯಾಗಾರ ಆಯೋಜನೆ

 ಒಂದು ದಿನದ ಎಐ ನಿಮ್ಮ ಕೈಯಲ್ಲಿ ಪ್ರಾಯೋಗಿಕ ಕಾರ್ಯಾಗಾರ ಆಯೋಜನೆ



ಶಿಕ್ಷಣ ವಿಭಾಗದಿಂದ ಒನ್ ಡೇ ಹ್ಯಾಂಡ್ಸ್-ಆನ್ ವರ್ಕ್ ಶಾಪ್ ಕಾರ್ಯಗಾರ ಆಯೋಜನೆ


ಬೆಂಗಳೂರು: ಮಾ.17: ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಣ ವಿಭಾಗ, ಡಾ. ಅಂಬೇಡ್ಕರ್ ಶಿಕ್ಷಣ ಕಾಲೇಜು ಮತ್ತು ಸೇಂಟ್ ಪೌಲ್ಸ್ ಶಿಕ್ಷಣ ಕಾಲೇಜು ಸಹಯೋಗದೊಂದಿಗೆ 'ಒನ್ ಡೇ ಹ್ಯಾಂಡ್ಸ್-ಆನ್ ವರ್ಕ್ ಶಾಪ್' ಎ ಮೊಬೈಲ್-ಬೇಸ್ಡ್ ವರ್ಕ್ ಶಾಪ್ ಫಾರ್ ಪ್ರಾಸ್ಪೆಕ್ಟಿವ್ ಟೀಚರ್ ಎಡುಕೇಟೋರ್ಸ್ ಎನ್ನುವ ಪ್ರಾಯೋಗಿಕ ಕಾರ್ಯಾಗಾರವು ಪಿಎಂ ಉಷಾ ಉಪಕ್ರಮದಡಿಯಲ್ಲಿ ನಡೆಸುವ ಕಾರ್ಯಕ್ರಮವು ವಿವಿಯ ಆಡಳಿತ ಕಚೇರಿಯ ಸೆನೆಟ್ ಹಾಲ್ ನಲ್ಲಿ ಬುಧವಾರ ಬೆಳಗ್ಗೆ 9:30ರಂದು ಆಯೋಜಿಸಲಾಗುತ್ತದೆ ಎಂದು ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ಸಂಯೋಜಕರಾದ ಡಾ. ವಾಣಿಶ್ರೀ ಕೊಪ್ಪದ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಎಐ ನಿಮ್ಮ ಕೈಯಲ್ಲಿ ಪ್ರಾಯೋಗಿಕ ಕಾರ್ಯಾಗಾರವನ್ನು 

ಮೊಬೈಲ್ ಲಾರ್ನಿಗ್, ಟೀಚರ್ ಎಜುಕೇಷನ್, ಇನ್ನೋವೇಟೇಷನ್, ಎನ್ಇಪಿ 2020 ಮತ್ತಿತರ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯ ಶಿಕ್ಷಣ ಮತ್ತು ತರಬೇತಿ ಶಾಲೆಯ ಸಹ ಪ್ರಾಧ್ಯಾಪಕರಾದ ಡಾ. ಕೆ. ತಿಯಾಗು ವಿಶೇಷ ಉಪನ್ಯಾಸ ನೀಡುವವರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌರವಾನ್ವಿತ ಕುಲಪತಿಗಳಾದ ಪ್ರೊ. ಡಾ. ಜಯಕರ ವಹಿಸುವರು, ಅತಿಥಿಗಳಾಗಿ ಕುಲಸಚಿವೆ ಶ್ರೀಮತಿ ಶಾಂತಲಾ ಕೆ.ಟಿ,  ಕುಲಸಚಿರು (ಮೌಲ್ಯಮಾಪ) ಪ್ರೊ. ಸಿ. ಎಸ್. ಕರಿಗಾರ್, ವಿತ್ತಾಧಿಕಾರಿ ಡಾ. ಸುನೀತಾ ಎಂ, ಪಿಎಂ ಉಷಾ ನೋಡಲ್ ಅಧಿಕಾರಿಗಳಾದ ಪ್ರೊ. ವಿ ಸುದೇಶ್, ಸಂಪನ್ಮೂಲ ವ್ಯಕ್ತಿಯಾಗಿ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರ್ಗಿಯ ಶಿಕ್ಷಣ ಮತ್ತು ತರಬೇತಿ ಶಾಲೆಯ ಸಹ ಪ್ರಾಧ್ಯಾಪಕ ಡಾ. ಕೆ. ತಿಯಾಗು, ಉಪಸ್ಥಿತಿಯಲ್ಲಿ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ಸಂಯೋಜಕರಾದ ಡಾ. ವಾಣಿಶ್ರೀ ಕೊಪ್ಪದ್, ಶಿಕ್ಷಣ ನಿಕಾಯ ಡೀನರು ಹಾಗೂ ಪ್ರಾಧ್ಯಾಪಕ ಡಾ. ಎಂ.ಸಿ. ಎರ್ರಿಸ್ವಾಮಿ, ವಿಶೇಷ ಆಹ್ವಾನಿತರಾಗಿ ಎಲ್ಲಾ ಡೀನ್‌ಗಳು, ಎಲ್ಲಾ ಅಧ್ಯಕ್ಷರು, ಸಿಂಡಿಕೇಟ್ ಮತ್ತು ಶೈಕ್ಷಣಿಕ ವಿದ್ಯಾ ಪರಿಷತ್ ಸದಸ್ಯರು ಹಾಗೂ ಡಾ. ಅಂಬೇಡ್ಕರ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಶಿವಣ್ಣ ವಿ.ಟಿ, ಸೇಂಟ್ ಪೌಲ್ಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ರೂಪಾ ಎನ್.ಟಿ, ಅತಿಥಿ ಉಪನ್ಯಾಸಕರಾದ ಡಾ.ಪ್ರದೀಪ್ ಕುಮಾರ್ ಟಿ, ಡಾ. ನವೀನ್ ಕುಮಾರ್ ಎಲ್.ಸಿ, ಡಾ. ತಿಮ್ಮರಾಜು ಟಿ, ಡಾ. ನಂದಿನಿ ಎನ್, ಡಾ. ಶೋಭಾ ಎಂ, ಡಾ. ಕಲ್ಯಾಣಿ ಕೆ, ಡಾ. ನಂದಿನಿ ಎ, ಸಿಬ್ಬಂದಿ ವರ್ಗ, ಸಂಶೋಧನಾರ್ಥಿಗಳು, ಎಂ.ಎಡ್ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಾಣಾರ್ಥಿಗಳು ಭಾಗವಹಿಸುವವರು ಎಂದು ವಿಭಾಗದ ಸಂಯೋಜಕರು ಹೇಳಿದ್ದಾರೆ.


ವರದಿ : ಡಾ. ವಿಲಾಸ್ ಕಾಂಬಳೆ 

ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments