🌹*ಗಜ಼ಲ್*🌹

 🌹*ಗಜ಼ಲ್*🌹



ನಮ್ಮದು ವಿದ್ಯಾರ್ಥಿಗಳ ಮುಂದಿನ ಬದುಕಿಗೆ ಜೀವ ತುಂಬುವ ಅಸಮಾನ್ಯ ಕುಟುಂಬ

ವಿಶೇಷವಾಗಿ ಜೈವಿಕ ಜಗತ್ತನ್ನು ನಿತ್ಯ ಜೀವನಕೆ ಪರಿಚಯಿಸುವ ನಿಸ್ವಾರ್ಥ ಬಿಂಬ


ಜ್ಞಾನದ ಮಧು ಸಂಗ್ರಹಿಸಿ ಸಿಹಿ ಹಂಚುವ ಕೀಟಗಳಲ್ಲವೇ ನಾವು

ರಸಾತಲದ ನಾಗರಗಳು ಕಲೆಹಾಕಿದ ವಿಸ್ಮಯಗಳ ಅಮೂಲ್ಯ ಡಿಂಬ


ಸಖ್ಯತೆಯ ಸುಕುಮಾರ ಪ್ರಜ್ವಲಿಸುವ ಉಮೆ ಕೀರ್ತಿ ಪ್ರಾಯರು ಮಂಜುಳ ಗಾನಕೆ

ರಾಮ ರಹೀಮರ ಭಾವೈಕ್ಯತೆಯ ಸಂಕೇತವೇ ಇಲ್ಲಿ ಆಧಾರ ಸ್ತಂಭ


ನವ ಉಲ್ಲಾಸದಿ ವಿಷಯ ಅರಿಯುವ ದಾಹ ಕಾಣಿರಿ ಹಜೀರಾ ಉಮೇಶರಲಿ

ಅರವಿಂದ ವದನಗಳು ಅರಳಿ ನಿಂತಿವೆ ವಿಕಸನದ ಹಾದಿಯಲಿ ತುಂಬ


ಉಷಾಕಿರಣ ಪ್ರಖರ ಸ್ಪರ್ಶಿಸಿತು ತುಳಸಿ ದಳಗಳ ಎಳೆ ಮನಗಳ ಮೇಲೆ

ಸಂಸ್ಕಾರ ಸಂಕೀರ್ತನೆಗಳ ಭೋಧಿಸಿ ಶಿವರಾಮ ಕೃಷ್ಣರು ಭರಿಸಿದರು ಸಂಕಲ್ಪದ ಕುಂಭ


*ನಮ್ಮ ಜೀವಶಾಸ್ತ್ರ ವಿಷಯದ  ಸ್ನೇಹಿತರನೊಳಗೊಂಡ ಗಜ಼ಲ್.*


🎸ಸುಕುಮಾರ

Image Description

Post a Comment

0 Comments