*ಇಂದು ವಿಶ್ವ ಇಡ್ಲಿಯ ದಿವಸ*
ಜಗದ ಇಡ್ಡಲಿ ದಿವಸವೀದಿನ
ದಿಗಿಲುಗೊಳ್ಳದೆ ತಿಂದುಬಿಡಿ ನಾ-
ಲಗೆಯ ಬಯಕೆಯು ಪೂರ್ಣಗೊಳ್ಳುವ ತನಕ ಬಿಸಿಯಾಗಿ|
ಭುಗಿಲುಗೊಳ್ಳಲು ಹಸಿವು ತಿಂದರೆ
ಸೊಗವು ಹೆಚ್ಚುವುದಂತೆ ಜೊತೆಯಲಿ
ಸಿಗಲು ತೆಂಗಿನ ಚಟ್ಣಿ ಸಾಂಬಾರ್ ಬನ್ನಿ ಜೊತೆನೀಡಿ||
*ಕಿಗ್ಗಾಲು ಎಸ್ ಗಿರೀಶ್*
೩೦-೦೩-೨೦೨೬
0 Comments