🌹*ಗಜ಼ಲ್*🌹
ಜೊತೆ ಜೊತೆಯಾಗಿ ಕಲೆತು ಬಂದಿವೆ ಯುಗಾದಿ ರಂಜಾ಼ನ್ ಹಬ್ಬಗಳು
ಸ್ನೇಹ ಸೌಹಾರ್ದತೆ ಮೊಳೆತು ಸಂದಿವೆ ಯುಗಾದಿ ರಂಜಾ಼ನ್ ಹಬ್ಬಗಳು
ಹಳೇ ಬೇರು ಹೊಸ ಚಿಗುರು ಗಿಡಮರಗಳಲಿ ಕಂಡಿರಾ
ಭಕ್ತಿ ಉಪವಾಸ ಸಂಭ್ರಮಗಳನು ತಂದಿವೆ ಯುಗಾದಿ ರಂಜಾ಼ನ್ ಹಬ್ಬಗಳು
ದಾನ ಧರ್ಮ ಆತ್ಮ ಶುದ್ಧೀಕರಣದ ಸಮಯವಿದು ಅರಿಯಿರಿ
ಸುಖ ದುಃಖ ಸಹಬಾಳ್ವೆ ಸಮನ್ವಯ ತರಿಸಿವೆ ಯುಗಾದಿ ರಂಜಾ಼ನ್ ಹಬ್ಬಗಳು
ಹೊಸ ಉಡುಗೆ ತೊಡುಗೆ ಆಭರಣಗಳ ತೊಟ್ಟ ಜನರ ಮಿಲನದ ಮೋಡಿ
ಪಂಚಾಂಗ ಶ್ರವಣ ಕುರಾನ್ ಪಠಣ ಮೇಳೈಸಿವೆ ಯುಗಾದಿ ರಂಜಾ಼ನ್ ಹಬ್ಬಗಳು
ಮನೆ ಮನವ ಶುಚಿಸಿ ತೋರಣದಿ ಸಿಂಗರಿಸಿ ಪ್ರಾರ್ಥನೆಯಲಿ ತೊಡಗಿರಿ
ಹೋಳಿಗೆ ಹಲೀಮ್ ಪಚಡಿಗಳ ಮೃಷ್ಟಾನ್ನ ಬಡಿಸಿವೆ ಯುಗಾದಿ ರಂಜಾ಼ನ್ ಹಬ್ಬಗಳು
ದೇವ ಒಬ್ಬನೇ ನಾಮ ಹಲವು ಅರಿತು ಬಾಳಿರಿ ಎಲ್ಲರೂ
ಕುಲ ಮತ ಪಂಥಗಳ ಒಗಟನು ಬಿಡಿಸಿವೆ ಯುಗಾದಿ ರಂಜಾ಼ನ್ ಹಬ್ಬಗಳು.
*ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು*
🎸ಸುಕುಮಾರ

.gif)

.gif)


0 Comments