*ಯುಗಾದಿ*

 *ಯುಗಾದಿ*


ನವ ಸಂವತ್ಸರದ ಈ ಶುಭ ಘಳಿಗೆಯಲ್ಲಿ,

ನೋವುಗಳು ದೂರವಾಗಿ ನಲಿವುಗಳು ತುಂಬಲಿ…

ಮಕರಂದ ತುಂಬಿದ ಹೂವಿನಂತೆ

ನಿಮ್ಮ ಮನಸುಗಳು ಸದಾ ಅರಳಲಿ…



ಬೇವು-ಬೆಲ್ಲಗಳ ಸಿಹಿ-ಕಹಿ ಬೆರೆತಂತೆ,

ಜೀವನದ ಕಹಿ ಕ್ಷಣಗಳು ಮರೆಯಾಗಲಿ…

ಸಂತಸದ ಸುಂದರ ಬದುಕು

ನಿಮ್ಮ ಪಾಲಾಗಲಿ…



ಕಳೆದ ಕಹಿ ನೆನಪುಗಳನ್ನು ಮರೆತು,

ಹೊಸ ಬೆಳಕಿನ ದಾರಿಗೆ ನಡೆದು,

ನವ ಜೀವನದ ಪಯಣದಲ್ಲಿ

ಪ್ರತಿ ಹೆಜ್ಜೆಯೂ ಯಶಸ್ಸಾಗಲಿ…



ಹೊಸ ಕನಸುಗಳ ರೆಕ್ಕೆಗಳನ್ನು ಹರಡಿ,

ಭವಿಷ್ಯದ ದಾರಿಯಲ್ಲಿ ಬೆಳಕು ಚೆಲ್ಲಲಿ…

ಹೃದಯದಲ್ಲಿ ಹಸಿರು ನಂಬಿಕೆ ಮೂಡಿ,

ಪ್ರತಿ ದಿನವೂ ಹೊಸ ಆಶೆಯಾಗಿ ಅರಳಲಿ…



ಸಮೃದ್ಧಿ ನಿಮ್ಮ ಮನೆ ಬಾಗಿಲು ತಟ್ಟಲಿ,

ಸಂತೋಷ ಸದಾ ನಿಮ್ಮ ಜೊತೆಗಿರಲಿ…

ಯುಗಾದಿಯ ಈ ಶುಭ ಕ್ಷಣಗಳಲ್ಲಿ,

ನಿಮ್ಮ ಜೀವನ ಸುಖ-ಶಾಂತಿಯಿಂದ ತುಂಬಿರಲಿ…


🌸 ಶುಭ ಯುಗಾದಿ! 🌸


✍️ *ಶ್ರೀಕಾಂತ ಹೊನ್ನಪ್ಪನವರ*

ಮುಖ್ಯ ಶಿಕ್ಷಕರು, *9686604666*

Image Description

Post a Comment

0 Comments