*ಯುಗಾದಿ ಹಬ್ಬದ ಆಶಯ*

 *ಯುಗಾದಿ ಹಬ್ಬದ ಆಶಯ*



ಈ ಪರಾಭವ ವತ್ಸರವು ಬಲು

ಕೋಪ ತಾಪಗಳನ್ನು ಮಣಿಸಲಿ

ದೀಪದೊಲು ಬೆಳಕನ್ನು ಚೆಲ್ಲಲಿ ತೋಷ ಹೆಚ್ಚಿಸಲಿ|

ಭೂಪರಲಿ ಕೊಳಗುಳದ ಬಯಕೆಯ

ಲೋಪಗೈದು ಯುಗಾದಿ ಮನಸಿನ

ವೈಪರೀತ್ಯಗಳನ್ನು ತೊಲಗಿಸಿ ನೆಮ್ಮದಿಯ ತರಲಿ||೧೭೬||

[ ಭಾಮಿನೀಷಟ್ಪದಿ ]


{ ವತ್ಸರ= ವರ್ಷ; ಭೂಪರು= ಅರಸರು; ಕೊಳಗುಳ= ಯುದ್ಧ }


*ಕಿಗ್ಗಾಲು ಎಸ್ ಗಿರೀಶ್*

೧೯-೦೩-೨೦೨೬

Image Description

Post a Comment

0 Comments