* ನಿಷ್ಕ್ರಿಯ ಜೀವಕ್ಕೆ , ದಯಾಮರಣ ವೇ ದಿಕ್ಕು*

 *ನಿಷ್ಕ್ರಿಯ  ಜೀವಕ್ಕೆ  , ದಯಾಮರಣ ವೇ ದಿಕ್ಕು* .



ಅನಾರೋಗ್ಯದಿಂದ ಅಲುಗಾಡಲಾರದ ಸ್ಥಿತಿಯಲ್ಲಿ 

ಆಸರೆ , ಆರೈಕೆಯ ತಾಳ್ಮೆ ಕಾಣೆ ಯಾರಲ್ಲಿ 

ನೋವು ಕೊಟ್ಟು ನೋವಿಂದ ನರಳುವುದಕ್ಕಿಂತ ,

ಲೋಕ ಬಿಟ್ಟು ತೆರಳುವುದೇ ಲೇಸು .


ಈ ವಿಷಯ ಕೇಳುವವರಿಗೆ ಅಯ್ಯೋ ಪಾಪ ಎನಿಸುತ್ತದೆ ಎಂದಾಗ ಇನ್ನು ಇದು ಹೆತ್ತವರಿಗೆ ಹೇಗಾಗಬೇಡ . ಖಂಡಿತ ಅವರಿಗೆ ಅದು ನುಂಗಲಾರದ ತುತ್ತು.  ಯಾವ ತಂದೆ ತಾಯಿಯರೂ ಮತ್ತು ಹಿರಿಯರು ಕೂಡ ತಮ್ಮ ಸಾವಿಗಿಂತ ಮುನ್ನ ಮಕ್ಕಳ ಸಾವನ್ನು ಬಯಸುವುದಿಲ್ಲ. ಅವರು ಚೆನ್ನಾಗಿ ಬಾಳಬೇಕು ಎಂಬ ಆಶಾಭಾವನೆ ಸದಾ ಇರುತ್ತದೆ. ಅನಿರೀಕ್ಷಿತವಾಗಿ ಬರುವ ಖಾಯಿಲೆ ಮತ್ತು ಅಪಘಾತ ಸಂಭವಿಸಿದೆ ಎಂದಾದರೆ, ಹೇಗಾದರೂ ಮಾಡಿ ತಮ್ಮ ಮಕ್ಕಳನ್ನು ಉಳಿಸಿಕೊಳ್ಳಲು ತಮ್ಮ ಶಕ್ತಿ ಮೀರಿ ಪ್ರಯತ್ನ ಮಾಡುತ್ತಾರೆ. ಆದಾಗ್ಯೂ ಪರಿಸ್ಥಿತಿ ಕೈಮೀರಿ ಹೋದಾಗ ಯಾರೂ ಏನೂ ಮಾಡಲಾರರು .


ಏನೆಲ್ಲಾ ಕಷ್ಟಪಟ್ಟು ಹೇಗಾದರೂ ಮಾಡಿ ಜೀವವನ್ನು ಉಳಿಸಲು ಶತಪ್ರಯತ್ನ ಮಾಡಿದರೂ ಪ್ರಯೋಜನವಿಲ್ಲ ಎಂದಾಗ , ಅಥವಾ ಅನಿವಾರ್ಯತೆ ಎದುರಾಗಿದೆ ಎಂದಾಗ ತಂದೆ ತಾಯಿಯರು ಅಥವಾ ಕುಟುಂಬದ ಸದಸ್ಯರು ಒಂದು ಗಟ್ಟಿ ನಿರ್ಧಾರ ಮಾಡಿ ದಯಾಮರಣ ಕ್ಕೆ ಅನುವು ಮಾಡಿಕೊಳ್ಳುವುದು ತುಂಬಾ ಉತ್ತಮ.  (ಪರಿಸ್ಥಿತಿ ಗೆ ಅನುಗುಣವಾಗಿ ಮಾತ್ರ) 


ಕೆಲವು ರೋಗಿಗಳಿಗೆ ಅವರ ರೋಗದ ಲಕ್ಷಣಗಳಿಗೆ ಅನುಸಾರವಾಗಿ ಕೆಲವು ಉತ್ತಮ ಡಾಕ್ಟರ ಅವರೇ ಹೇಳುತ್ತಾರೆ ಅಥವಾ ಸಲಹೆ ನೀಡುತ್ತಾರೆ. ನೀವು ಹೆಚ್ಚು ಹಣ ಖರ್ಚು ಮಾಡುವುದು ಬೇಡ. ಕಾರಣ ಏನೇ ಚಿಕಿತ್ಸೆ ಮಾಡಿದರೂ ವ್ಯಕ್ತಿ ಬದುಕುವ ಸಾಧ್ಯತೆ ಇಲ್ಲ. ಹಾಗಾಗಿ ಇರುವಷ್ಟು ದಿನ ಚೆನ್ನಾಗಿ ನೋಡಿಕೊಳ್ಳಿ. ಎಂದು ಹೇಳಿ ಈಗ ಮನೆಗೆ ಕರೆದುಕೊಂಡು ಹೋಗಿ ಎಂದು ಕಳುಹಿಸುತ್ತಾರೆ. 


ಇತ್ತ ಹಣವೂ ಉಳಿಯಲಿಲ್ಲ ಇತ್ತ ರೋಗಿಯೂ ಉಳಿಯದೆ ಹೋದರೆ ಉಳಿದವರ ಪಾಡೇನು?  ಅದನ್ನು ಸ್ವಲ್ಪ ಯೋಚನೆ ಮಾಡಬೇಕು ಅಲ್ಲವೇ.

ಕಾರಣ ಇವತ್ತಿನ ದಿನಗಳಲ್ಲಿ ಜೀವನ ನಡೆಸುವುದು ತುಂಬಾ ಕಷ್ಟ . ಮನೇಲಿ ಎಲ್ಲರೂ ಸೇರಿ ದುಡಿದರೂ ಸಂಸಾರಕ್ಕೆ ಸಾಕಾಗುವುದಿಲ್ಲ. ಹೀಗಿರುವಾಗ ಹೊಲ , ಮನೆ, ವಡವೆ ಏನೇನೋ ಕಳೆದುಕೊಂಡರೂ ವ್ಯಕ್ತಿ ಸಹಜವಾಗಿ ಓಡಾಡುವ ಹಾಗಾಗದಿದ್ದರೆ ಏನು ಪ್ರಯೋಜನ. ಸತ್ತರೆ ನಾಲ್ಕು ದಿನ ಅತ್ತು ಕರೆದು ಸುಮ್ಮನಾಗುತ್ತಾರೆ. ಆದರೆ ವರ್ಷವಿಡೀ ಮನೆಯಲ್ಲಿ ಜೀವಂತ ಹೆಣವನ್ನು ಇಟ್ಟುಕೊಂಡು ನಿತ್ಯವೂ ಅನುಭವಿಸುವ ನೋವು ಯಾತನೆ ಇದೆಯಲ್ಲಾ ಅದು ಎಲ್ಲರನ್ನೂ ಮಾನಸಿಕವಾಗಿ ಕೊಂದು ಹಾಕುವುದು.


ಆದ್ದರಿಂದ ಜೀವ ಕೋಮಕ್ಕೆ ಹೋದಾಗ , ಎಷ್ಟೇ ವರ್ಷಗಳ ಚಿಕಿತ್ಸೆಯ ನಂತರವೂ ಚಿಕಿತ್ಸೆ ಫಲಕಾರಿಯಾಗದೆ ದೇಹ ನಿಷ್ಕ್ರಿಯತೆ ಯಲ್ಲಿ ಇರುವಾಗ , ಇಂತಹ ಸಂದರ್ಭದಲ್ಲಿ ಕುಟುಂಬದವರು ಸ್ವಲ್ಪ ಸಂಯಮದಿಂದ ಯೋಚಿಸಿ ಇಂತಹ ದಯಾಮರಣ ದ ನಿರ್ಧಾರಕ್ಕೆ ಬರುವುದು ಒಳ್ಳೆಯದು. ನಿತ್ಯ ಅಳುವುದಕ್ಕಿಂತ ಒಮ್ಮೆ ಅತ್ತು ಬಿಡುವುದು ಒಳ್ಳೆಯದು. 


ಇಲ್ಲಿ ಇನ್ನೊಂದು ಬಹು ಮುಖ್ಯ ನಿರ್ಧಾರಕ್ಕೆ ಬರಬಹುದು. ಅಂತಹ ಪರಿಸ್ಥಿತಿಯಲ್ಲಿ ದಯಾಮರಣ ದ ಜೊತೆಗೊಂದು ದೇಹದಾನ ದ ಒಂದೊಳ್ಳೆ ಕಾರ್ಯ ಆ ವ್ಯಕ್ತಿಯಿಂದ ನಡೆದರೆ ಜೀವ ಸಾರ್ಥಕತೆ ಪಡೆಯುತ್ತದೆ.


       ✍️ಡಾ ಮಹೇಂದ್ರ ಕುರ್ಡಿ

Image Description

Post a Comment

0 Comments