ಭಾರರತದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದು : ಡಾ. ಶಿವಾನಂದ ಹೆಳವರ
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಹಾಗೂ ಶಿಕ್ಷಣ ಪ್ರಸಾರಕ ಮಂಡಳ ರಾಯಬಾಗ
ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾರೂಗೇರಿ
ಇವುಗಳ ಸಹಯೋಗದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಏಳು ದಿನಗಳ ವಿಶೇಷ ಸೇವಾ ಶಿಬಿರ 2026, "ನನ್ನ ಭಾರತಕ್ಕಾಗಿ ಯುವಕರು" ಎಂಬ ಧ್ಯೇಯ ವಾಕ್ಯದೊಂದಿಗೆ ಎರಡನೇ ದಿನದ ಕಾರ್ಯಕ್ರಮ ದತ್ತು ಗ್ರಾಮವಾದ ನಿಡಗುಂದಿಯಲ್ಲಿ ಹಮ್ಮಿಕೊಂಡಿದ್ದು.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಶಿವಾನಂದ ಹೆಳವರ ಮಾತನಾಡಿ ಭಾರತದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದು ಯುವಕರು ಒಂದು ರಾಷ್ಟ್ರದ ಶಕ್ತಿ ಭವಿಷ್ಯ ದೇಶದ ಜನಸಂಖ್ಯೆಯಲ್ಲಿ ಯುವಕರ ಪ್ರಮಾಣ ಹೆಚ್ಚು ಇರುವುದರಿಂದ ಭಾರತವನ್ನು ಯುವ ರಾಷ್ಟ್ರ ಎಂದು ಕರೆಯಲಾಗುತ್ತದೆ.ಆದ್ದರಿಂದ ಭಾರತದ ನಿರ್ಮಾಣದಲ್ಲಿ ಯುವಕರ ಪಾತ್ರ ಹೊಣೆಗಾರಿಕೆ ಬಹಳ ಮುಖ್ಯ . ಯುವಕರು ಉತ್ತಮ ಶಿಕ್ಷಣ ಪಡೆದು ಜ್ಞಾನ ಮತ್ತು ಕೌಶಲ್ಯ ಹೆಚ್ಚಿಸಿಕೊಳ್ಳಲು ಹೇಳಿದರು. ಪ್ರೋ ಬಿ.ಎನ್ ಅಸ್ಕಿ ಮಾತನಾಡಿ ವಿದ್ಯಾರ್ಥಿಗಳು ವಿಜ್ಞಾನ ತಂತ್ರಜ್ಞಾನ ಅಳವಡಿಸಿಕೊಂಡು ಪ್ರಗತಿ ಸಾಧಿಸಲು ಕರೆ ನೀಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ
ಶ್ರೀಮತಿ ಜೆ ಬಿ ಬರಡ್ಡಿ ಮಾತನಾಡಿ ವಿದ್ಯಾರ್ಥಿಗಳು ಶಿಸ್ತು ಸಂಯಮ ಪ್ರಾಮಾಣಿಕತೆ ಅಳವಡಿಸಿಕೊಳ್ಳ ಬೇಕೆಂದರು ಹಾಗೂ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ಆರ್‌ಎಂ ಮಾಲಗಾರ ಹಾಗೂ ಸಹ ಶಿಬಿರಾ ಧಿಕಾರಿಗಳಾದ ಪ್ರೊ. ಭರತೇಶ ಕಾಂಬಳೆ ಉಪಸ್ಥಿತರಿದ್ದರು
ಈ ಕಾರ್ಯಕ್ರಮದಲ್ಲಿ ಪ್ರಾರ್ಥನಾಗಿತೆಯನ್ನು ಸ್ವಯಂ ಸೇವಕರು ಹಾಡಿದರು ಹಾಗೂ ಏನ್ ಎಸ್ ಎಸ್ ಗೀತೆಯನ್ನು ಶಿಲ್ಪಾ ಜಾದವ ಹಾಗೂ ಸಂಗಡಿಗರು ಹಾಡಿದರು ಸ್ವಾಗತ ಮತ್ತು ಮಾಲಾರ್ಪಣೆಯನ್ನು ಸಂತರಾಮ ಹಾಲ್ಗೊಂಡ ಮಾಡಿದರು.ಕಾರ್ಯಕ್ರಮ ಶಾರದಾ ನಿರೂಪಿಸಿದರು
ವಂದನಾರ್ಪಣೆಯನ್ನು ಪ್ರೊ. ಆರ್ ಎಂ ಮಾಲಗಾರ ಸರ್ ನಡೆಸಿದರು.ಸ್ವಯಂ ಸೇವಕ ಮತ್ತು ಸೇವಕಿಯರು ಉಪಸ್ಥಿತರಿದ್ದರು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ವರದಿ : ಡಾ. ವಿಲಾಸ್ ಕಾಂಬಳೆ
ಕನ್ನಡ ಉಪನ್ಯಾಸಕರು
ಹಾರೂಗೇರಿ

.gif)

.gif)


0 Comments