ರಾಯಬಾಗ : ಕನ್ನಡ ಸಾಹಿತ್ಯ ಪರಿಷತ್ತು ರಾಯಬಾಗ್ ಇವರ ಸಹಯೋಗದಲ್ಲಿ ನಗರದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಯುವಕವಿ ವಿಠ್ಠಲ್ ಗೆಣ್ಣೂರ್ ಅವರ ಜೈನಾಪುರ ಸ್ವಾತಂತ್ರ್ಯ ಸೇನಾನಿ ವೀರ ಕಾಶೀಬಾಯಿ ಎಂಬ ಪ್ರಥಮ ಕವನ ಸಂಕಲನವನ್ನು ಪುಸ್ತಕ ಬಿಡುಗಡೆ
ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು .ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಯಭಾಗದ ಹಿರಿಯ ಸಾಹಿತಿಗಳಾದ ಶ್ರೀ ಶಿವಾನಂದ ಬೆಳಕೂಡ ರವರು ವಹಿಸಿದ್ದರು. ಗ್ರಂಥಾ ಲೋಕಾರ್ಪಣೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಈರನಗೌಡ ಪಾಟೀಲರು ನೆರವೇರಿಸಿದರು. ಹಾಗೂ ಗ್ರಂಥ ಪರಿಚಯವನ್ನು ಸಾಹಿತಿಗಳಾದ ಶ್ರೀ ಟಿ ಎಸ್ ವಂಟಗೂಡಿ ಮಾಡಿದರು. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ಶ್ರೀ ಶಂಕರ್ ಕ್ಯಾಸ್ತಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀ ವೀರಣ್ಣ ಮಡಿವಾಳರ ಹಾಗೂ ಬೆಳಗಾವಿ ಜಿಲ್ಲೆಯ ಖ್ಯಾತ ನಾಟಕಕಾರರ ಮತ್ತು ಸಾಹಿತಿಗಳಾದ ಶ್ರೀ ಅವಳೇ ಕುಮಾರ ಮತ್ತು ನಿವೃತ್ತ ಸೇನಾಧಿಕಾರಿಗಳಾದ ಶ್ರೀ ಗಣಪತಿ ಕಾಂಬಳೇ ಆಗಮಿಸಿದ್ದರು, ಈ ಕಾಯ೯ಕ್ರಮದಲ್ಲಿ ಶ್ರೀಶೈಲ ಶಿರೂರು, ಸಾಗರ ಝಂಡೇನ್ನವರ, ಎಸ್ ಬಿ ನಾಯಿಕ , ತ್ಯಾಗರಾಜ ಕದಮ ಮತ್ತು ಎಲ್ಲಾ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ವರದಿ : ಡಾ. ವಿಲಾಸ್ ಕಾಂಬಳೆ
ಕನ್ನಡ ಉಪನ್ಯಾಸಕರು
ಹಾರೂಗೇರಿ

.gif)

.gif)


0 Comments