*ಮುಂಜಾವು*
ಬೇಸಿಗೆ ಮುಂಜಾವು ತಂದಿತು ನವೋಲ್ಲಾಸ
ಮೈಮನಗಳಿಗೆ ಪುಳಕದ ಹರ್ಷ
ಬದುಕ ಬಂಡಿಗೆ ಇಂದನ ಪೂರೈಸಿ
ದೂರ ತೀರಕೆ ಯಾನವ ಮಾಡಿ
ಸಜ್ಜುಗೊಳಿಸಿ ನರ ನಾಡಿ
ಹರಿಸಿ ಉಲ್ಲಾಸದ ಒರತೆ
ಕಂಡುಕೊಳ್ಳಬೇಕು ಸಾರ್ಥಕತೆ
ಸರಿಸಾಟಿ ಇಲ್ಲ ಆ ಭಾವಕೆ
ಕೂಜನವ ಆಸ್ವಾದಿಸಿ
ರವಿ ರಶ್ಮಿಯ ರಮಿಸಿ
ತೆರೆದುಕೊಳ್ಳುವ ದಿನದ ಉಗಮಕೆ
ಸ್ನೇಹ ಬಂಧಗಳ ಆ ಸಂಗಮಕೆ
🎸ಸುಕುಮಾರ

.gif)

.gif)


0 Comments