7 ದಿನಗಳ ವಾರ್ಷಿಕ ವಿಶೇಷ ಏನ್ ಎಸ್ ಎಸ್ ಸೇವಾ ಶಿಬಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ

 7 ದಿನಗಳ ವಾರ್ಷಿಕ ವಿಶೇಷ ಏನ್ ಎಸ್ ಎಸ್ ಸೇವಾ ಶಿಬಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ 



ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಹಾಗೂ ಶಿಕ್ಷಣ ಪ್ರಸಾರಕ ಮಂಡಳ ರಾಯಬಾಗ

 ಕಲಾ,ವಿಜ್ಞಾನ ಮತ್ತು ವಾಣಿಜ್ಯ ಹಾಗೂ ಸ್ನಾತಕೋತರ  ಅಧ್ಯಯನ ಕೇಂದ್ರ ಹಾರೂಗೇರಿ 

 ಇವುಗಳ ಸಂಯುಕ್ತ ಆಶ್ರಯದಲ್ಲಿ,ರಾಷ್ಟ್ರೀಯ ಸೇವಾ ಯೋಜನೆಯ  ಏಳು ದಿನಗಳ ವಿಶೇಷ ಸೇವಾ ಶಿಬಿರ 2026, "ನನ್ನ ಭಾರತಕ್ಕಾಗಿ ಯುವಕರು" ಎಂಬ ಧ್ಯೆಯ ವಾಕ್ಯಯೊಂದಿಗೆ ಈ ಕಾರ್ಯಕ್ರಮಕ್ಕೆ ಇವತ್ತು ದಿನಾಂಕ14/03/2026ರಂದು ಉದ್ಘಾಟನೆ ಮಾಡುವುದರೊಂದಿಗೆ ಚಾಲನೆ ನೀಡಲಾಯಿತು.ದತ್ತು ಗ್ರಾಮವಾದ  ನಿಡಗುಂದಿಯಲ್ಲಿ ಹಮ್ಮಿಕೊಂಡಿದ್ದು,ಈ ಕಾರ್ಯಕ್ರಮಕ್ಕೆ ಅಧ್ಯಕ್ಷರು ಸನ್ಮಾನ್ಯ ಶ್ರೀ ಬ್ಯಾರಿಸ್ಟರ್ ಅಮರಸಿಂಹ (ಅಣ್ಣಾ )  ವ. ಪಾಟೀಲ. ಚೇರ್ಮನ್ನರು, ಶಿಕ್ಷಣ ಪ್ರಸಾರಕ ಮಂಡಳ ರಾಯಬಾಗ, ಮಾಜಿ ಲೋಕಸಭಾ ಸದಸ್ಯರು, ಬೆಳಗಾವಿ ಇವರ ಅನುಪಸ್ಥಿತಿಯಲ್ಲಿ ನಮ್ಮ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಎಸ್ ಎಸ್  ಉಮರಾಣಿ  ವಹಿಸಿಕೊಂಡಿದ್ದರು.ಹಾಗೂ ಈ  ಕಾರ್ಯಕ್ರಮದ ಉದ್ಘಾಟಕರಾಗಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಹಾಲಪ್ಪ ಹಕ್ಕಿಮರಡಿ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಬರಮು ಮುರುಗುಂಡ ವಹಿಸಿಕೊಂಡಿದ್ದರು . ಅತಿಥಿಗಳಾಗಿ ಶ್ರೀ ರಾಜು ಪಸಾನೆ ದೈಹಿಕ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ನಿಡಗುಂದಿ ವಹಿಸಿಕೊಂಡಿದ್ದರು. ಅಥಿತಿಗಳಾಗಿ ಆಗಮಿಸಿ ಸ್ವಯಂ ಸೇವಕ ಸೇವಕಿಯರಿಗೆ ಸ್ವಚ್ಛತೆ ಕಡೆಗೆ ನಿಮ್ಮ ಗಮನ ವಿರಬೇಕು,ತಾವೆಲ್ಲರೂ ಶಿಸ್ತು ಮತ್ತು ಸಮಯಕ್ಕೆ ಹೆಚ್ಚಿನ ಒತ್ತು ಕೊಡಬೇಕು ಎಂದು ಹಿತ ನುಡಿಗಳ್ಳನ್ನು ಹಂಚಿಕೊಂಡರು. ಹಾಗೂ ಉಪಸ್ಥಿತರಾಗಿ ಡಾ. ಸಿಡಿ ಠಾಣೆ ಹಾಗೂ ಪ್ರೊ. ಎಸ್ ಬಿ ಕಲಚಿಮಡ್ ವಹಿಸಿಕೊಂಡಿದ್ದರು.ಪ್ರೊ  ಕೆ ಬಿ ಕೊಚೇರಿ, ಡಾ. ವಿಲಾಸ್ ಕಾಂಬಳೆ, ಪ್ರೊ ಎಲ್ ಸಿ ಬಿರಾದರ್, ಬಿ ಬಿ ತೋಡಕರ್  ಕಾರ್ಯಕ್ರಮದಲ್ಲಿ ಉಪಸ್ಥಿತರದ್ದು, ಕಾರ್ಯಕ್ರಮಕ್ಕೆ ಶೋಭೆಯನ್ನು ತಂದರು.ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ಆರ್‌ಎಂ ಮಾಲಗಾರ್ ಹಾಗೂ ಸಹ ಶಿಬಿರಾ ಧಿಕಾರಿಗಳಾದ ಪ್ರೊ. ಭರತೇಶ ಕಾಂಬಳೆ  ವೇದಿಕೆ ಮೇಲೆ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಪ್ರಾರ್ಥನಾಗಿತೆಯನ್ನು  ಕು.ಶಿಲ್ಪಾ ಜಾಧವ ಹಾಗೂ ಸಂಗಡಿಗರು ಹಾಡಿದರು ಹಾಗೂ ಏನ್ ಎಸ್ ಎಸ್ ಗೀತೆಯನ್ನು ಶಾರದಾ ಹಾಗೂ ಸಂಗಡಿಗರು ಹಾಡಿದರು. ವೇದಿಕೆಯ ಮೇಲಿನ ಎಲ್ಲ ಗಣ್ಯ ಮಾನ್ಯರನ್ನು  ಪ್ರೊ. ಎಸ್ ಎಚ್ ಜೋಗನ್ನವರ ಸ್ವಾಗತಿಸದರು. ಹಾಗೂ  

ಮಾಲಾರ್ಪಣೆಯನ್ನು   ಕಾರ್ಯಕ್ರಮವನ್ನು ಡಾ. ಬಿ. ಆರ್  ಟೋಮರೆ ನಡೆಸಿಕೊಟ್ಟರು.ಕೊನೆಯದಾಗಿ ವಂದನಾರ್ಪಣೆಯನ್ನು ಪ್ರೊ. ಕೆ ಎಸ್ ಹಾರೂಗೇರಿ ಅಚ್ಚುಕಟ್ಟಾಗಿ ನಡೆಸಿ ಕೊಟ್ಟರು.


ವರದಿ : ಡಾ. ವಿಲಾಸ್ ಕಾಂಬಳೆ

 ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments