ವಿಶ್ವ ಕರಡಿ ದಿನವನ್ನು ಪ್ರತಿ ವರ್ಷ ಮಾರ್ಚ್ 23ರಂದು World Bear Day ಆಚರಿಸಲಾಗುತ್ತದೆ

 🐻 ವಿಶ್ವ ಕರಡಿ ದಿನವನ್ನು ಪ್ರತಿ ವರ್ಷ ಮಾರ್ಚ್ 23ರಂದು World Bear Day ಆಚರಿಸಲಾಗುತ್ತದೆ


ಈ ದಿನವು ಕರಡಿಗಳ ಮಹತ್ವವನ್ನು ತಿಳಿಸುವುದಕ್ಕೂ ಅವುಗಳ ಸಂರಕ್ಷಣೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕೂ ವಿಶೇಷವಾಗಿ ಮೀಸಲಾಗಿದೆ ಪ್ರಪಂಚದ ವಿವಿಧ ಭಾಗಗಳಲ್ಲಿ ಹಲವು ವಿಧದ ಕರಡಿಗಳು ವಾಸಿಸುತ್ತಿದ್ದು ಪ್ರತಿಯೊಂದು ಪ್ರಜಾತಿಗೂ ಪ್ರಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ ನಮ್ಮ ದೇಶದ ಹಿಮಾಲಯ ಮತ್ತು ಕಾಡು ಪ್ರದೇಶಗಳಲ್ಲಿ ಕಂಡುಬರುವ Himalayan Brown Bear ದೊಡ್ಡ ದೇಹದ ಕರಡಿ ಆಗಿದ್ದು ಚಳಿ ಪ್ರದೇಶಗಳಿಗೆ ಹೊಂದಿಕೊಂಡಿದೆ ಅದೇ ರೀತಿ Asiatic Black Bear ಕಪ್ಪು ಬಣ್ಣದ ದೇಹದೊಂದಿಗೆ ಎದೆ ಮೇಲೆ ಬಿಳಿ ಗುರುತು ಹೊಂದಿದ್ದು ಕಾಡುಗಳಲ್ಲಿ ವಾಸಿಸುತ್ತದೆ Sloth Bear ಭಾರತದಲ್ಲಿ ಸಾಮಾನ್ಯವಾಗಿ ಕಾಣುವ ಕರಡಿ ಆಗಿದ್ದು ಹುಳುಗಳು ಹಣ್ಣುಗಳು ತಿನ್ನುವ ಮೂಲಕ ಪರಿಸರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ Sun Bear ಅತಿ ಚಿಕ್ಕ ಕರಡಿ ಪ್ರಜಾತಿಯಾಗಿದ್ದು ದಕ್ಷಿಣ ಏಷ್ಯಾದ ಕಾಡುಗಳಲ್ಲಿ ಕಂಡುಬರುತ್ತದೆ ಈ ಎಲ್ಲಾ ಕರಡಿಗಳು ಕಾಡಿನ ಪರಿಸರ ಸಮತೋಲನ ಕಾಪಾಡಲು ಬಹಳ ಮುಖ್ಯವಾಗಿವೆ ಇವು ಬೀಜ ವಿತರಣೆಯಲ್ಲಿ ಸಹಾಯ ಮಾಡುವುದರಿಂದ ಹೊಸ ಮರಗಳು ಬೆಳೆಯಲು ಕಾರಣವಾಗುತ್ತವೆ ಮತ್ತು ಜೀವ ವೈವಿಧ್ಯತೆಯನ್ನು ಉಳಿಸಲು ಸಹಕಾರಿಯಾಗುತ್ತವೆ ಆದರೆ ಇಂದಿನ ದಿನಗಳಲ್ಲಿ ಕಾಡು ನಾಶವಾಗುತ್ತಿರುವುದು ಮಾನವ ಮತ್ತು ಪ್ರಾಣಿಗಳ ನಡುವೆ ಸಂಘರ್ಷ ಹೆಚ್ಚಾಗುತ್ತಿರುವುದು ಅಕ್ರಮ ಬೇಟೆ ನಡೆಯುತ್ತಿರುವುದು ಇವುಗಳ ಪರಿಣಾಮವಾಗಿ ಕರಡಿಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಇದನ್ನು ತಡೆಯಲು ನಾವು ಎಲ್ಲರೂ ಕಾಡುಗಳನ್ನು ರಕ್ಷಿಸುವುದು ಪರಿಸರ ಸ್ನೇಹಿ ಜೀವನ ಶೈಲಿಯನ್ನು ಅನುಸರಿಸುವುದು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ವನ್ಯಜೀವಿ ಸಂರಕ್ಷಣೆಗೆ ಕೈಜೋಡಿಸುವುದು ಅತ್ಯಂತ ಅಗತ್ಯವಾಗಿದೆ ಕರಡಿಗಳನ್ನು ಉಳಿಸುವುದು ಎಂದರೆ ನಮ್ಮ ಪ್ರಕೃತಿಯನ್ನು ಉಳಿಸುವುದೇ ಆಗಿದೆ ನಮ್ಮ ಭವಿಷ್ಯಕ್ಕಾಗಿ ಪ್ರಕೃತಿಯನ್ನು ಕಾಪಾಡುವುದು ನಮ್ಮ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ


ಬೇರು ಭೂಮಿ 🌱 #berubhoomi #savewildlife #karnatakawildlife #karnataka  #saveanimals #wildlifevoice

Image Description

Post a Comment

0 Comments