"ಇದು ಎಲ್ಲೆಡೆ ಸುದ್ದಿಯಾಗುತ್ತಿರುವ ನಟ್ಟು-ಬೋಲ್ಟಿನ ಮೇಲಿನ ಸಪ್ತ ಹನಿಗಳು. ಸದ್ದಾಗುತ್ತಿರು
ವ ಟೈಟು ಟಾಕು ಫೈಟಿನ ಸುತ್ತಲ ಗುಪ್ತ ದನಿಗಳು. ಇಲ್ಲಿ ಪ್ರಸಕ್ತ ವರ್ತಮಾನದ ವೈಪರೀತ್ಯಗಳ ಕುರಿತಾದ ಲಘು ಲಾಸ್ಯವಿದೆ. ಪ್ರಸ್ತುತ ವಿದ್ಯಮಾನಗಳ ಪರಿಹಾಸ್ಯವಿದೆ. ದಿಕ್ಕು ತಪ್ಪುತ್ತಿರುವ ವ್ಯವಸ್ಥೆಯ ಬಗೆಗೆ ಆಸ್ಥೆಯೂ ಇದೆ. ನಮ್ಮೆಲ್ಲರ ಪ್ರಾಥಮಿಕ ಬದ್ದತೆಯ ಸಾತ್ವಿಕ ಆಕ್ರೋಶವೂ ಇದೆ. ನಸುನಗುವಿನ ಹನಿಗಳೊಳಗೆ ಸಾಮಾಜಿಕ ಕಳಕಳಿ, ಚಿಂತನೆಗಳ ಖನಿಯೂ ಇದೆ. ಏನಂತೀರಾ.?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
1. ರಿಕ್ವೆಸ್ಟು.!
ಭಯದಿ ವಿನಂತಿಸುತಿದೆ ಸ್ಪಾನರು
‘ನಟ್ಟು-ಬೋಲ್ಟುಗಳ ಬಿಡಿ ಸಾರು
ಅದೇನಿದ್ದರು ನನ್ನಯ ಮ್ಯಾಟರು’
*******************
2. ಬಣ್ಣ ಬಯಲು.!
ಸದ್ದಾಗುತ್ತಿದ್ದಂತೆ ನಟ್ಟು-ಬೋಲ್ಟಿನ ಟಾಪಿಕ್ಕು
ಬಣ್ಣದ ಮಂದಿಯೆಲ್ಲರೂ ಟೋಟಲೀ ಶಾಕು
‘ಬರೋಬ್ಬರಿ ಸರಿ’ ಎಂದು ಕೆಲವರ ರೋಪು
‘ಬೇಡ ಉಸಾಬರಿ’ ಎಂದು ಹಲವರು ಎಸ್ಕೇಪು.!
******************
3. ಫಲಾನುಭವಿಗಳು.!
ಅಂದು ಅವರೊಡನೆ ಪಾದಯಾತ್ರೆ
ಹೋದವರಿಗೆ ಪದವಿ ಪಂಚಪಾತ್ರೆ
ಹೋಗದಿದ್ದವರಿಗೆಲ್ಲ ಧಮ್ಕಿಮಾತ್ರೆ.!
******************
4. ನಿಶ್ಶಬ್ಧ.!
ಕೇಳಿ ನಟ್ಟು-ಬೋಲ್ಟಿನ ಮ್ಯಾಟರು
ಸಾಹಿತ್ಯಲೋಕದಲ್ಲಿಯೂ ಟೆರರ್‍ರು
ಬಾಯಿಯೇ ಬಿಡುತ್ತಿಲ್ಲ ಯಾರ್‍ಯಾರು
ಎಲ್ಲರಿಗೂ ಮುಖ್ಯ ತಮ್ಮ ಫ್ಯೂಚರು.!
***********************
5. ಸುದ್ದಿ-ಸದ್ದು.!
ಬಿಸಿಯೇರುತ್ತಿದ್ದಂತೆ ನೆಟ್ಟು-ಬೋಲ್ಟಿನ ಚರ್ಚೆ
ಸ್ಪಾನರು, ಸ್ಕೃಡ್ರೈವರು ಹೋಗಿವೆ ಮೂರ್ಛೆ
ತಿಂದಂತಾಗಿದೆ ಹಲವರಿಗೆ ಹಸಿ ಹಸಿರು ಮಿರ್ಚಿ
ಅದೇಕೋ ಅಲುಗಾಡುತ್ತಿದೆ ಕೆಲವರ ಕುರ್ಚಿ.!
********************
6. ಎಫೆಕ್ಟು.!
‘ಮಾಡ್ತೀನಿ ನಟ್ಟುಬೋಲ್ಟುಗಳ ಟೈಟು’
ಕೇಳಿ ಒದ್ದೆಯಾಗಿದೆ ಕೆಲವರ ಶರ್ಟು
ತಪ್ಪೇನಿದೆ ಎಂದು ಹಿಡಿತಾವ್ರೆ ಬಕೆಟ್ಟು.!
********************
7. ಜೋಕೆ.!
ಬೇಸರ, ಕೋಪ, ಆಕ್ರೋಶ, ಅಸಹನೆ ಓಕೆ
ನಟ್ಟು-ಬೋಲ್ಟುಗಳ ವಿಷಯವಾದರು ಏಕೆ?
ಈ ಟೈಟು, ಫೈಟುಗಳ ನುಡಿಗಳು ಬೇಕೇಕೆ?
ದರ್ಪ, ದುರಹಂಕಾರಕೆ ಭವಿಷ್ಯವಿಲ್ಲ ಜೋಕೆ.!
ಎ.ಎನ್.ರಮೇಶ್.ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments