* *ಚಿತ್ರಕವನ*
*ಒಲವರಾಗ
*
ಗೆಳತಿ ನೀ ಮಗುವಂತೆ ನಗುವಾಗ
ನವಿಲ ನಾಟ್ಯದಂತೆ ನೀನಡೆವಾಗ
ಅಂತರಾಳದ ಭಾವ ಕಂಡೆ ಕಣ್ಣಿನಾಗ
ಜೊತೆಗೂಡಿ ಸಾಗೋಣ ಬಾ ಬಾಳಿನಾಗ
ನಗುವ ಮೊಗವನ್ನೊಮ್ಮೆ ನೋಡಬೇಕಿದೆ
ಪ್ರೀತಿಗಾಗಿ ಉಡುಗೊರೆಯೊಂದು ನೀಡಬೇಕಿದೆ
ಪೋಣಿಸಿಟ್ಡ ಭಾವಮಾಲೆ ಹಾಕಬೇಕಿದೆ
ಹೃದಯ ಮಿಡಿದು ಖುಶಿಯಿಂದ ಹಾಡಬೇಕಿದೆ
ಸೆಳೆತವಿದೆ ಕೊಲ್ಮಿಂಚಿನ ನೋಟದಾಗ
ಯಾರಿಲ್ಲ ನಿನ್ನಂಗ ಅಚ್ಚು ಮೆಚ್ಚು ನೀ ನನಗ
ಪರಿಶುದ್ದ ಪ್ರೇಮದ ಅಮಲು ಹೃದಯದಾಗ
ತಿರುಗಿ ನೋಡು ನುಡಿಸಲಿರುವೆ ಒಲವರಾಗ
ಓ ನನ್ನ ಪ್ರೀತಿಯ ಹೃದಯವೇ ..
ಪುಟಿದೆದ್ದಿದೆ ಭಾವಲಹರಿ ಚೆಲುವೇ
ಪ್ರೇಮ ನಿವೇದನೆ ಇದು ಒತ್ತಾಯವಲ್ಲ
ನೀ ಒಪ್ಪಿದರೆ ಸಾಗಿಸುವ ಹೊಸ ಜೀವನವ
ನನ್ನೀ ಮನದ ಹೊಸ ಹುರುಪು ನೀನು
ಕರೆದೊಯ್ಯಲು ತಂದೆ ಪ್ರೀತಿ ಅಂಬಾರಿಯನು
ರಾಗ ತಾಳ ವಿಲ್ಲದೇನೆ ಹಾಡೊಂದ ಹಾಡಿದೆನು
ಬಾಳ ಸಂಗಾತಿಯಾಗಿ ನಿನ್ನನ್ನೆ ಸ್ವೀಕರಿಸುವೆನು
*ಅಶೋಕ ಬೇಳಂಜೆ*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments