ನೇತ್ರಾಣಿ ದ್ವೀಪ
ಸಾಗರ ಮಧ್ಯದಲ್ಲೊಂದು ಎತ್ತರದ ಸುಂದರ ನೇತ್ರಾಣಿ ದ್ವೀಪ. ದೂರದಿಂದ ನೋಡುಲು ಚೆಂದ.ದ್ವೀಪದಲ್ಲಿ ನಿಂತು ವಿಶಾಲವಾದ ಸಾಗರದ ರಮಣೀಯ ಸೌಂದರ್ಯ ನೋಡುವಾಗ ಮನಸ್ಸಿಗೆ ಆನಂದ. ನೇತ್ರಾಣಿಯಲಿ ಎಲ್ಲೆಲ್ಲೂ ಹಸಿರು,ದಟ್ಟ ಅರಣ್ಯ, ಕಲ್ಲು, ಬೆಟ್ಟಗಳು.ಯಾರು ನೆಟ್ಟರೋ ಈ ಗಿಡ, ಮರಗಳನ್ನು.? ಅವರವರ ಭಾವ,ನಂಬಿಕೆಯಲ್ಲಿ ಸ್ಥಾಪಿಸಿದ ದೇವ, ದೈವ ಕಂಬಗಳು. ವರ್ಷಕ್ಕೊಮ್ಮೆ ಮೀನುಗಾರರಿಂದ ಪೂಜೆ.ಎಲ್ಲೆಲ್ಲೂ ಪಕ್ಷಿಗಳ ಇಂಪಾದ ಗಾನ, ಹರಕೆಯಲ್ಲಿ ಬಿಟ್ಟ ಕುರಿ, ಕೋಳಿಗಳು. ದ್ವೀಪದ ಸುತ್ತ ಸಾಗರದ ನೀರಿನ ಆಳ.ಕಲ್ಲು ಪೊರೆ, ಮೋಟೆಗಳು.
ಆಳದಲ್ಲಿ ರಾಶಿ,ರಾಶಿಗಳು ಮೀನುಗಳು. ಕಾದು ಕುಳಿತು ಮೀನು ಹಿಡಿಯುವ ಮೀನುಗಾರ.
ಎಲ್ಲರನ್ನು ಕೈ ಬೀಸಿ ಕರೆಯುತ್ತಿದೆ ನೇತ್ರಾಣಿ ದ್ವೀಪ.ಆದರೇ ಪ್ರವಾಸೋದ್ಯಮ ಇಲಾಖೆ ಇನ್ನು ಅನುಮತಿ ನೀಡಿಲ್ಲ. ಸಾಗರದ ಮಧ್ಯೆ ಎರಡರಿಂದ ಮೂರು ಗಂಟೆಗಳು ಪ್ರಯಾಣ ಇರುವದರಿಂದ. ಸಮುದ್ರದಲ್ಲಿ ಗಾಳಿ, ನೀರಿನ ಸೆಳೆತಕ್ಕೆ ಅಲೆಗಳು ಏಳುವುದು ಹೆಚ್ಚು.ಪ್ರವಾಸಿಗರ ಕರೆತರಲು ಕಷ್ಟವು ಹೌದು.
ಸ್ರಷ್ಟಿಯ ಅದ್ಭುತವೂ ಒಂದು
ಈ ಸುಂದರ ನೇತ್ರಾಣಿ ದ್ವೀಪ..
ಕಡಲಕವಿ
ಶಿವಾನಂದ ಬಿ ಮೊಗೇರ
ಭಟ್ಕಳ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments