*ವಿಶ್ವ ಸಾಮಾಜಿಕ ನ್ಯಾಯ ದಿನದ ಮಹತ್ವ*
*"""'''''''''''''''''''''''''''''''"""""''''''''''''''''''''''''''''''''''''''''''"""'''"""""*
ಮನುಜರಲ್ಲಿ ಅಪರಾಧಿಗಳ ನ್ಯಾಯ ಅನ್ಯಾಯಗಳ ಪರಾಮರ್ಶೆಗೆ ಸತ್ಯದ ವೇದಿಕೆ,
ವ್ಯಕ್ತಿಯ ಸಂಕಲ್ಪಿತ ಬದುಕಿಗೆ ಜೀವನ ಪರ್ಯಂತ ಪರಿವರ್ತನೆಯ ಭೂಮಿಕೆ,
ಬಡವ ಬಲ್ಲಿದನೆಂಬ ತಾರತಮ್ಯ ಸರಿಸಿ ವ್ಯಕ್ತಿಗೆ ನ್ಯಾಯ ಕೊಡುವ ಕಟಕಟೆ
ನ್ಯಾಯಾಧೀಕರಣದಿಂದ ತಪ್ಪಿತಸ್ಥರ ಆತ್ಮ ವಿಮರ್ಶೆಯ ಮನಸಿಗೊಂದು ಕೋಟೆ,
ವಿಶ್ವದಲ್ಲಿ ಅವಗಢಗಳ ದೌರ್ಜನ್ಯ ನಿಯಂತ್ರಿಸುವ ಕಡಿವಾಣಕೆ ನ್ಯಾಯಾಲಯ,
ಒಂದು ರೀತಿಯಲ್ಲಿ ತಪ್ಪು ದಾರಿಯಲಿ ದಿಕ್ಕು ತಪ್ಪಿ ನಡೆವ ಮನುಜರಿಗೆ ದೀಕ್ಷಾಲಯ,
ಖೈದಿ ಸ್ಥಾನದಲ್ಲಿರುವವರಿಗೆ ನ್ಯಾಯಾಲಯ ಅನುಕಂಪದ ಸನ್ನಡತೆ,
ಬದುಕಿನಲಿ ಸತ್ಯಪರತೆಯ ಹಾದಿಯಲಿ ಸಾಗಲು ಸಾಮಾಜಿಕ ದಯಾಪರತೆ,
ಈ ನಿಟ್ಟಿನಲಿ ನ್ಯಾಯ ಅನ್ಯಾಯಗಳ ಮಹತ್ವವರಿತು ಕಾಳಜಿಗೆ ಪುರಸ್ಕರಿಸೋಣ,
ನ್ಯಾಯಾಧೀಕರಣದ ಬಗ್ಗೆ ಜನ ಜಾಗೃತಿಯ ಮನೋಧರ್ಮದ ಮರ್ಮವರಿಯೋಣ......////
*•••••••••••••••••••••••••••••••••••••••*
ನಿಮ್ಮ ಆತ್ಮೀಯ ಶಿಕ್ಷಕ ಮಿತ್ರ :-
*ಕೈವಲ್ಯಸಾಹಿತಿ-ಬೋ.ಪಾ.ವೆಂಕಟೇಶ್,ಬೋಧನಹೊಸಹಳ್ಳಿ,ಹೊಸಕೋಟೆ-ತಾ/*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments