ನಮ್ಮ ಪುಟ್ಟಿ
ಪುಟ್ಟಿಯು ಆಟಕೆ
ಹೊರಗೆ ಹೊರಟಳು
ಬಿಸಿಲಿನ ಝಳವನು
ಕಂಡು ಹೆದರಿದಳು
ಪುಟ್ಟಿಗೆ ತಿಳಿದಿಲ್ಲವಿದು
ಬೇಸಿಗೆಯನ್ನುವುದು
ಬಿಡಲಿಲ್ಲ ಮಳೆರಾಯನಿಗೆ
ಬಾ ಬಾ ಎನ್ನುವುದು
ಮೌನಕ್ಕೆ ಜಾರಿವೆ
ಜಾಲಿ ಬೇವು ಮಾವು
ದಿನೇ ದಿನೇ ಹೆಚ್ಚುತ್ತಿದೆ
ಭೂಮಿಯ ಕಾವು
ಅಪ್ಪನಿಗೆ ಛತ್ರಿಯ
ತರಲು ಹೇಳಿದಳು
ದಿನವಿಡೀ ಕನ್ನಡಿಯ
ಮುಂದೇನೆ ಕುಳಿತಳು
ಅಮ್ಮನಿಗೆ ಕೇಳಿದಳು
ನಾ ಕಪ್ಪಾಗಿರುವೇನೇ ಎಂದು
ಅಪ್ಪ ತಂದನು ಖುಷಿಯಲಿ
ಛತ್ರಿಯನು ಕೊಂಡು
::-✍🏻ವಿರೂಪಾಕ್ಷಿ ಎಂ.ಯಲಿಗಾರ,
೧೦/೦೨/೨೦೨೫
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments