ನಿವೇದನೆ..!

 "ಇದು ರಾಧೆ ಕೃಷ್ಣನಿಗೆ ಹೇಳಿದ್ದೋ.? ಕೃಷ್ಣನೆ ರಾಧೆಗೆ ಹೇಳಿದ್ದೋ.? ನಲ್ಲ ನಲ್ಲೆಗೆ ಉಲಿದಿದ್ದೋ.? ನಲ್ಲೆನೆ ನಲ್ಲನಿಗೆ ಉಲಿದಿದ್ದೋ.? ಅಥವಾ ನೀವೇ ನಿಮ್ಮ ತಾರುಣ್ಯದಲ್ಲಿ ನಿಮ್ಮ ಪ್ರೇಮಿಗೆ ಅರುಹಿದ್ದೋ.? ಅಥವಾ ನಿಮ್ಮ ಪ್ರೇಮಿನೇ ನಿಮಗೆ ಅರುಹಿದ್ದೋ..  ಕವಿತೆಯ ಹಿನ್ನೆಲೆ ಬಗ್ಗೆ ಯಾಕೆ ಸುಖಾಸುಮ್ಮನೆ ಕನ್ನುಫ್ಯೂಶನ್ನು.. ಒಟ್ಟಿನಲ್ಲಿ ಇದೊಂದು ಚೆಂದದ ಒಲವಿನ ನಿವೇದನೆ..  ಪ್ರೇಮಕ್ಕೆ ಪದಗಳ ಆರಾಧನೆ. ಅನುರಾಗದ ಭಾವ-ಭಾಷ್ಯಗಳ ಅರ್ಪಣೆ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.



ನಿವೇದನೆ..! 



ನನ್ನೆದೆಯ ಮೌನಕೆ 

ಮಾತಾಗಿ ಬಿಡು.!

ಮನದ ಮಾತುಗಳಿಗೆ

ದನಿಯಾಗಿ ಬಿಡು.!


ಉಸಿರಿನ ಶೃತಿಗೆ 

ಸ್ವರವಾಗಿ ಬಿಡು.!

ಹೃದಯದ ತಾಳಕೆ

ನಾದವಾಗಿ ಬಿಡು.!


ಆಂತರ್ಯದ ಪದಕೆ 

ಪದ್ಯವಾಗಿ ಬಿಡು.!

ಒಡಲಿನ ಗೀತೆಗೆ 

ಸಂಗೀತವಾಗಿ ಬಿಡು.!


ಒಲವಿನ ಭಾವಕೆ 

ಜೀವವಾಗಿ ಬಿಡು.!

ಒಳಗಿನ ಗುಡಿಗೆ 

ದೈವವಾಗಿ ಬಿಡು.!

  

ಎ.ಎನ್.ರಮೇಶ್. ಗುಬ್ಬಿ.

Image Description

Post a Comment

0 Comments