ಅಶ್ರು ತರ್ಪಣ.!

 "ಇದು ಚಿತ್ರಕ್ಕಾಗಿ ಬರೆದ ಕವಿತೆಯಲ್ಲ. ಚಿತ್ರವೇ ಬರೆಸಿದ ಭಾವಗೀತೆ. ಕಾಡಿದ ಅಂತರ್ಜಾಲದ ಪಟ, ಆಂತರ್ಯಕ್ಕಿಳಿದು ಮೂಡಿಸಿದ ಪದ್ಯ. ಹೆಚ್ಚೇನು ಹೇಳಲಾರೆ.. ಚಿತ್ರ ನೋಡಿ.. ಕವಿತೆ ಓದಿ.. ನಿಮ್ಮಲ್ಲೂ ಸಾವಿರ ಸಂವೇದನೆಗಳು ಮೊರೆದಾವು. ಅಗಣಿತ ಭಾವ ಭೋರ್ಗರೆದಾವು. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.



ಅಶ್ರು ತರ್ಪಣ.!



ಕಂಗಳ ಕಂಬನಿಗೆ ಕೊಡ

ಹಿಡಿದು ಕೂತಿದೆ ಕೂಸು.!

ಉಕ್ಕುವ ಬಿಸಿ ಭಾಷ್ಪಕೆ

ಬಿಕ್ಕುವ ರೋಧನೆ ಹಾಸು.!


ಈ ಕಂಗಳು ಸಹ ನನ್ನದೆ

ಅ ಕೂಸು ಕೂಡ ನನ್ನದೆ

ಜೀವದ ನೋವಿನ ಹನಿಗೆ

ಭಾವದ ಸ್ಪಂದನೆಯ ದನಿ.!


ಜಾರಿದ ಹನಿ ಹನಿಯಲು

ಸಾವಿರ ಸಾವಿರದ ಕಥೆ

ಮೊರೆದ ದನಿ ದನಿಯಲು

ಸಹಸ್ರಾರು ಸಾಗರದ ವ್ಯಥೆ.!


ಎ.ಎನ್.ರಮೇಶ್. ಗುಬ್ಬಿ.

Image Description

Post a Comment

0 Comments