"ಅವ್ಯಕ್ತ ಸಂವೇದನೆಗಳ ಕಾವ್ಯಾಂಬುಧಿಯಿದು. ಅಗೋಚರ ಅರ್ಥಗಳ ಭಾವಶರಧಿಯಿದು. ವಾಚ್ಯ ಸಂಗತಿಗಳ ಹರಿವಿಗಿಂತ, ಸೂಚ್ಯ ವಿಷಯಗಳ ಹರವಿದೆ. ಅರಿತಷ್ಟೂ ಸಾರವಿದೆ. ಅರ್ಥೈಸಿದಷ್ಟೂ ವಿಸ್ತಾರವಿದೆ. ಕಂಬನಿ ಬಿಂದುಗಳ ಹನಿಗವಿತೆಯಲ್ಲ. ಕಣ್ಣೀರ ಸಿಂಧುವಿನ ಭಾವದೊರತೆಯಿದು. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಅಗೋಚರ.!
ಅವನು ಅವಳ
ನೆನಪಾದಾಗಲೆಲ್ಲಾ.....
ಈಜುಕೊಳಕ್ಕೆ
ಹೋಗುವನು ಈಜಾಡಲು.!
ಅವಳು ಅವನ
ನೆನಪಾದಾಗಲೆಲ್ಲಾ.....
ಅಡುಗೆಕೋಣೆಗೆ
ಹೋಗುವಳು ಈರುಳ್ಳಿಹೆಚ್ಚಲು.!
ಕಾಯ್ದಿಹರು ಕಣ್ಣೀರಿನ
ನೋವು ನರಳಿಕೆಯೆಲ್ಲ
ಲೋಕದ ಕಣ್ಣೆದುರು
ಆಗದಂತೆ ಬಟಾಬಯಲು.!
ಎ.ಎನ್.ರಮೇಶ್. ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments