ಪಾದಯಾತ್ರೆ.!

 "ಈ ಪಾದಯಾತ್ರೆ ಅಲ್ಲಲ್ಲ ದಂಡಯಾತ್ರೆ ನೀವು ಮಾಡಿದ್ದೀರಾ..?"


ಮಾಡಿದ್ದರೆ ಕಡೆತನಕ ಓದಿ.. ಮಾಡದಿದ್ದರೆ ಎಡಬಿಡದೆ ಕಡೆತನಕ ಓದಿ.. 


"ನಗುತ್ತಿರಿ. ನಗಿಸುತ್ತಿರಿ. ಹಾಗೆ ಒಂದು ಹುಡುಗಿ ಕೈಕೊಟ್ಟರೆ ನಿರಾಶರಾಗದಿರಿ, ಮತ್ತೊಂದು ಹುಡುಗಿಯ ಬೆನ್ನು ಹತ್ತಿರಿ. ಹ್ಹ..ಹ್ಹ..ಹ್ಹಾ. ಯೆಪ್ಪಾ.. ಯಾರೂ serious ಆಗಿ ತೆಗೆದುಕೊಳ್ಳಬೇಡಿ. ಈ ಕವನ ಕೇವಲ ನಗಿಸಲಿಕ್ಕಾಗಿ - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ"



ಪಾದಯಾತ್ರೆ.!



ಎಷ್ಟುದಿನ ಎಷ್ಟುವರ್ಷ 

ನಿಮ್ಮನೆ ಬೀದಿಯಾಗೆ 

ಮಾಡಿದ್ದೆ ಪಾದಯಾತ್ರೆ! 


ನೀನೇ ಕಾಡುತ್ತಿದ್ದೆ 

ಕುಂತ್ರೆ.. ನಿಂತ್ರೆ..! 

ನಿನ್ನದೇ ಜಪವಾಗಿತ್ತು 

ಹಗಲು ರಾತ್ರೆ..! 


ಎಷ್ಟು ಚೆಂದವಿತ್ತು 

ಹುಡುಗಿ ಪ್ರೇಮಜಾತ್ರೆ!


ನಿನ್ನೆ ಏಕಾಏಕಿ

ಕೊಟ್ಟೇಬಿಟ್ಟೆ ನಂಗೆ 

ನಿನ್ನ ಲಗ್ನಪತ್ರೆ!

ನಿಶ್ಚಯ ಮಾಡ್ಕೊಂಡು 

ಬೇರೆಯವನ ಜೊತೆ 

ನಿನ್ನ ವಿವಾಹಯಾತ್ರೆ!


ಕಡೆಗೂ ಇಟ್ಟೇಬಿಟ್ಟೇ 

ನನ್ನ ಕೈಗೆ ಪಂಚಪಾತ್ರೆ!

ಬೇಸರ ಬಂದು ನಂಗೆ 

ಈ ಜೀವನಯಾತ್ರೆ... 

ಸಾಯ್ಬೇಕು ಇವತ್ತು 

ನುಂಗಿ ನಿದ್ದೆಮಾತ್ರೆ... 


ಅಂದ್ಕೊಂಡೆ......... 

ನಿಜವಾಗಲು ಅಂದ್ಕೊಂಡೆ....

ಸತ್ಯವಾಗಲೂ ಅಂದುಕೊಂಡೆ...

...........................

ಆದ್ರೆ.... ಆದ್ರೇ... ಆದ್ರೇ...


ನಿನ್ನ ಪಕ್ಕದ್ಮನೆ 

ಹುಡುಗಿ ಕಳಿಸಿದ್ದಾಳೆ

ಇವತ್ತೇ ಪ್ರೇಮಪತ್ರೆ.! 

ಮತ್ತೆ ನಾಳೆಯಿಂದ

ಆರಂಭ ನೋಡು 

ನಿಮ್ಮ ಬೀದಿಯಾಗೆ 

ನನ್ನ ಪಾದಯಾತ್ರೆ.!!! 


ಎ.ಎನ್.ರಮೇಶ್. ಗುಬ್ಬಿ.

Image Description

Post a Comment

0 Comments