🌹*ಗಜ಼ಲ್*🌹

 🌹*ಗಜ಼ಲ್*🌹



ನೆನಪುಗಳ ಉಡುಗೊರೆ ನೀಡದಿರು ಕದಪು ಸುಡಬಹುದು ಗುಲಾಬಿ

ಪಕಳೆಗಳ ರಸಧಾರೆ ಚೆಲ್ಲದಿರು ಒನಪು ಜಾರಬಹುದು ಗುಲಾಬಿ


ಬಿಂಕವ ತೋರುತ ಸನಿಹ ತೊರೆದೆಯೇಕೆ ಬರಿದಾಯಿತು ಎದೆಯು

ಹಳತುಗಳ ಹಾಲ್ನೊರೆ ಕಾರದಿರು ಹೊಳಪು ಬಿರಿಯಬಹುದು ಗುಲಾಬಿ


ಚಂದನ ವನದಲ್ಲಿ ವಿಹರಿಸುತ್ತಿರುವೆ ಒಲವ ಘಮಲು ತಾಕಬಹುದೆಂದು

ಮುಳ್ಳುಗಳ ವಿಷಪೊರೆ ತಾಕಿಸದಿರು ಉಡುಪು ಕೆಂಪಾಗಬಹುದು ಗುಲಾಬಿ


ಒಲವ ನಿವೇದನೆಗೆ ಗೆಲುವು ತರುವ ವರವನು ನೀ ಪಡೆದಿರುವೆ

ಪ್ರೇಮಿಗಳ ಅಕ್ಕರೆ ಪೋಷಿಸುತ್ತಿರು ಬಿಳುಪು ರಂಗಾಗಬಹುದು ಗುಲಾಬಿ


ತುಟಿಗೆ ಮುತ್ತಿಡಲು ನಿನ್ನೊಡಲ ಕಾವು ತವಕಿಸುತ್ತಿದೆ ಜೋಕೆ

ಪುಳಕಗಳ ಮದಿರೆ ಕುಡಿಸುತ್ತಿರು ಮತಾಪು ಬೆಳಗಬಹುದು ಗುಲಾಬಿ


🎸*ಸುಕುಮಾರ*

Image Description

Post a Comment

0 Comments