* ದಿನದ ಪರಿ ಪರಿ ಪರಿಹಾಸ್ಯದ ಒಂಬತ್ತು ಹನಿಗಳು*

 "ಇಲ್ಲಿದೆ ಪ್ರೇಮಿಗಳ ದಿನದ ಪರಿ ಪರಿ ಪರಿಹಾಸ್ಯದ ಒಂಬತ್ತು ಹನಿಗಳು


.  FB, whatsap, Insta ದಲ್ಲಿ ಭೋರ್ಗರೆದ ಒಲವಿನಾರ್ಭಟದ ಘಮ್ಮತ್ತು ದನಿಗಳು. ವ್ಯಾಲೆಂಟಿನಾ ಡೇ ಕಿಸ್ಮತ್ತು ಖನಿಗಳು. ಇಲ್ಲಿ ಹಾಸ್ಯವಿದೆ, ಲಾಸ್ಯವಿದೆ, ವಿನೋದವಿದೆ, ವಿಡಂಬನೆಯಿದೆ, ಸ್ವಲ್ಪ ವಾಸ್ತವವೂ ಇದೆ. ನಗಿಸಲಿಕ್ಕೆಂದೆ ಬರೆದದ್ದು ಹಾಗಾಗಿ ಬಿಂಕ ಬಿಡಿ, ನಕ್ಕು ಬಿಡಿ. ನಗುವಿಗೇಕೆ ಬಿಂಕ.? ನಗುವಿಗಿಲ್ಲ ಸುಂಕ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.



1. ಮರುಳು.!


ಕೆಲವರದು ಅದೆಂತಹಾ ಬರಗೆಟ್ಟ ಬಾಳು

ತಮ್ಮದೇ ಫೇಕಕೌಂಟಿಗೆ ತಾವೇ ಪ್ರೇಮದ

ಪ್ರಪೋಸಲ್ಲು ಕಳಿಸಿಕೊಂಡು ಬೀಗುವ ಗೀಳು.!


******************


2. ಬೇ(ಡ)ಡಿಕೆ.!


ಅಬ್ಬಾ ಬಂದೈತೆ ನಿನ್ನೆ ಅವಳಿಗೆ

ಸಿಕ್ಕಾಪಟ್ಟೆ ಇನ್ಬಾಕ್ಸ್ ಪ್ರಪೋಸಲ್ಲು

ಇನ್ನೊಂದು ವರ್ಷವಾದರು ಬೇಕು

ಅವನ್ನು ಮಾಡಲು ಡಿಸ್ಸುಪೋಸಲ್ಲು.!


****************


3. ವ್ಯಾಲೆಂಟೇನು ಮಹಿಮೆ.!


ಅಬ್ಬಬ್ಬಾ ಓ ವ್ಯಾಲೆಂಟೇನು ತಾಯೆ

ನಿನ್ನದು ಅದೆಂತ ಪ್ರೇಮದ ಛಾಯೆ

ನಿನ್ನೆದಿನ ವಾಟ್ಸಾಪು ಮುಖಪುಸ್ತಕದಿ

ಮುದುಕರು ತರುಣರಾಗುವ ಮಾಯೆ.!


**************


4. ಗೋಡೆ ಮ್ಯಾಟ್ರು.!


ನಿನ್ನೆ ಮುಖಪುಸ್ತಕದ ಬಹಳಷ್ಟು

ಗೋಡೆಗಳಲಿ ಕಂಡ ಬರಹ..

"ನಮಗ್ಯಾರು ಮಾಡ್ತಾರೆ ಪ್ರಪೋಸಲ್ಲು"

ಇದು ವಿರಹವೋ? ಭಿನ್ನಹವೋ?

ಆಗ್ರಹವೋ.? ಆಮಂತಣವೋ.?


*********************


5. ಅಯೋಮಯ.!


ಈಪರಿ ಪ್ರೇಮಸಂದೇಶ, ಒಲವಕಾವ್ಯ ಕಂಡು

ಮೇಘಸಂದೇಶದ ಕಾಳಿದಾಸನಿಗೂ ಉಬ್ಬಸ

ಅಂತರ್ಜಾಲದ ಅಮರ(?) ಅನುರಾಗ ಕಂಡು

ದುಶ್ಯಂತ ಶಾಕುಂತಲೆಯರಿಗೂ ಬೆರಗು ಬೆಕ್ಕಸ.!


*******************


6. ಜೋಕೆ..!


ಚೆಂದದ ಕಾಲೇಜು ಲಲನೆಯರೆ

ಅಂದದ ಯಂಗೇಜು ಆಂಟಿಯರೆ

ಎಲ್ಲು ಬೀಳಿಸಬೇಡಿ ಮೊಬೈಲು

ಪತಪತನೆ ಹೊರಕ್ಕೆ ಉದುರ್‍ಯಾವು 

ನಿನ್ನೆಯ ರಾಶಿ ರಾಶಿ ಪ್ರಪೋಸಲ್ಲು.! 


*******************


7. ವೈಚಿತ್ರ್ಯ.!

 

ವ್ಯಾಲೇಂಟೇನು ದಿನವಷ್ಟೇ ಕೆಲವರ

ಮುಖಪುಸ್ತಕದಿ ಬರಹಗಳ ಫೌಂಟೇನು

ಉಳಿದ ವರ್ಷಪೂರ್ತಿ ಕ್ವಾರಂಟೇನು.!


**********************


8. ಫೇಕು-ಶೇಕು.!


ಚೆಂದುಳ್ಳಿ ಚೆಲುವೆಯ ಪಟ ಹಾಕಿ

ಮಾಡಿಕೊಂಡಿದ್ದ ಫೇಕು ಅಕೌಂಟು

ನಿನ್ನೆಯಿಂದ ಈತನಕ ಮಾಡಲಾಗುತ್ತಿಲ್ಲ 

ಬಂದಿರುವ ಪ್ರಪೋಸಲ್ಲುಗಳ ಕೌಂಟು.!


*****************


9.ಪ್ರೇಮ ಸುನಾಮಿ.!


ನಿನ್ನೆಯ ಸಹಸ್ರ ಸಹಸ್ರಾರು

ಪ್ರೀತಿಪ್ರೇಮ ಕಾವ್ಯದಲೆಗಳಿಂದ 

ಮುಖಪುಸ್ತಕ ಏದುಸಿರಿಡುತ್ತಿದೆ

ಅನುರಾಗದ ಅಜೀರ್ಣತೆಯಿಂದ

ಇಂದು ಮೆಲ್ಲ ಸುಧಾರಿಸಿಕೊಳ್ಳುತ್ತಿದೆ.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments