*ರನ್ನ ಪದ*

 *ರನ್ನ ಪದ*



ಬೆಳುಗಲಿ ನಾಡಲಿ ಬಳಗಾರ ಕುಲದಿ

ಕವಿ ಚಕ್ರವರ್ತಿ ರನ್ನ ಜನಿಸ್ಯಾನ,

ತಂದೆ ಜಿನವಲ್ಲಭ,ತಾಯಿ ಅಬ್ಬಲಬ್ಬೆ

ಪುಣ್ಯ ಸಂತಾನವೇ ಎನಿಸ್ಯಾನ


ಅಜಿತಸೇನಾಚಾರ್ಯ ಗುರುವಿನ

ವಿದ್ಯಾಭ್ಯಾಸ ಮಾಡಿ ಬೆಳದಾನ,

ಅತ್ತಿಮಬ್ಬೆ,ಸತ್ಯಾಶ್ರಯ,ಚಾವುಂಡ

ರಾಯರಲ್ಲಿ ಆಶ್ರಯ ಪಡದಾನ


ವಾಗ್ದೇವಿಯ ಸಾಹಿತ್ಯ ಭಂಡಾರದ 

ಬೀಗಮುದ್ರೆ ಒಡೆದು ನಿಂತಾನ,

ತನ್ನ ಕಾವ್ಯಕೃತಿಗಳ ಒರೆಗೆ ಹಚ್ಚಾಕ

ಎಂಟೆದೆ ಇರಬೇಕ ಎನುತಾನ


ಕವಿಮುಖಚಂದ್ರ,ಕವಿರಾಜಶೇಖರ

ಉಭಯಕವಿ ಬಿರುದು ಗಳಿಸ್ಯಾನ,

ವೀರ,ರೌದ್ರರಸಗಳ ಬೆರೆಸಿ ಬರೆದು

ಗದಾಯುದ್ಧವ ಜಗಕ ತಿಳಿಸ್ಯಾನ


ಹೇಳಿದರ ಮುಗಿಯುದಲ್ಲ ಕೇಳಿರಿ

ಮಹಾಕವಿ ರನ್ನನ ಗುಣಗಾನ,

ಇಂತ ಮಣ್ಣಿನೊಳಗ ಜನಿಸಿ ಬಂದ

ನಮ್ಮ ನಿಮ್ಮ ಜನುಮ ಪಾವನ


*ಎಮ್ಮಾರ್ಕೆ*

Image Description

Post a Comment

0 Comments