"ಹಾಗೆ ಒಂದು ಹಾಸ್ಯಗವಿತೆ. ಕಚಗುಳಿಯಿಡುತ ಮನ ಮುದಗೊಳಿಸುವ ನಗೆಗವಿತೆ. ಆನಂದದ ಹೊಂಗಿರಣಗಳ ಹರಡುವ ಆಮೋದದ ಅಕ್ಷರಪ್ರಣತೆ. ಓದಿ ಮನಸಾರೆ ನಕ್ಕುಬಿಡಿ. ನಗುನಗುತ್ತಾ ನಲುಮೆಯಿಂದೊಂದು ಕಾಮೆಂಟಿಸಿಬಿಡಿ. ನಗುವಿನಿಂದ ಅಕ್ಕಪಕ್ಕದಲ್ಲೂ ನಗೆಪ್ರಣತೆ ಹಚ್ಚಿಬಿಡಿ. ನಗೆ ಹಂಚುವುದಕಿಂತ ಮಿಗಿಲಾದ ನಾಕವೆಲ್ಲಿದೆ?. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಕೃತಿ-ಶೃತಿ
ಸಾಹಿತಿಗಳು ಕೇಳಿದರು
ತಮ್ಮ ಪರಮಶಿಷ್ಯನ..
“ನನ್ನ ರಚನೆಗಳಲ್ಲಿ
ಯಾವುದಯ್ಯ ನಿನಗೆ
ಇಷ್ಟವಾದ ಕೃತಿ..??”
ಶಿಷ್ಯ ನುಡಿದ...
“ಶೃತಿ..ಶೃತಿ..ಶೃತಿ”
ಕಕ್ಕಾಬಿಕ್ಕಿಯಾದ ಸಾಹಿತಿ
ಹೇಳಿದರು ಶಿಷ್ಯನಿಗೆ..
“ಏನಯ್ಯ ಇದು?
ನಾನಿನ್ನು ರಚಿಸಿಯೇ ಇಲ್ಲ
ಆ ಹೆಸರಿನ ಕೃತಿ!!”
ಶಿಷ್ಯ ಸಾಹಿತಿಗಳ
ಪಾದಹಿಡಿದು ಹೇಳಿದ..
“ಶೃತಿಯೆಂದರೆ.. ನೀವು
ಬರೆದ ಕೃತಿಯಲ್ಲ!
ನೀವು ಈ-ಭುವಿಗೆ
ನೀಡಿದ ಶ್ರೇಷ್ಠ ಕೃತಿ!!
ಸುಂದರ ಬಳುವಳಿ!!
ನಿಮ್ಮ ಮಗಳು ಶೃತಿ!!!
ಕೆಡಿಸಿಹಳು ನನ್ನ-ಮತಿ!
ಆಗಿಹೆನು ನಾನವಳಿಗೆ
ಸಂಪೂರ್ಣ ಶರಣಾಗತಿ!!
ನನಗೀಗ.. ನಿಮ್ಮ.....
ಪಾದವೇ ಗತಿ!!!”
ಕೇಳಿ ಶಿಷ್ಯನ ಕೃತಿಪ್ರೇಮ
ಸಾಹಿತಿಗಳಿಗೆ ಕೋಮ.!!
ಎ.ಎನ್.ರಮೇಶ್. ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments