* ಜುಲ್ ಕಾಫಿಯಾ ಗಝಲ್*

 *ಜುಲ್ ಕಾಫಿಯಾ ಗಝಲ್*



ಪ್ರಾಯಶಃ ಪ್ರೀತಿಸುತ್ತಲೇ ಇರುತ್ತೇನೆ

ಮನದಲ್ಲಿ ತುಟಿತವಿದೆ

ಏನೋ ಹೊಸತನದ ಹುಮ್ಮಸ್ಸು 

ಯೌವನದಲ್ಲಿ ಚೆಲುವಿದೆ


ಮನದಾಳದ ಕೋಣೆಯಲಿ ಬೀಡು

ಬಿಟ್ಟವು ನೆನಪುಗಳು

ಭಾವದೊತ್ತಡ ತಡೆಹಿಡಿಯಲಾಗದು

ರೋದನೆಯಲ್ಲಿ ನಲಿವಿದೆ


ನಗು ಮಾತು ನೋಟ ಎಲ್ಲವೂ

 ಹಸಿರಾದಂತೆ ಉಸಿರಿಗೆ

ಪ್ರೀತಿಯ ಚಿಲುಮೆಗಳು ತಂತಾನೆ ಬಡಿತ

 ಹೃದಯದಲ್ಲಿ ಸೆಳೆತವಿದೆ


ಪರಿಮಳವ ಸವಿಯುತ ಸೇರಬಯಸಿದೆ

 ಪ್ರೇಮಲೋಕ

ಕನಸಿನಲೂ ಕಾಡಿದೆ ಸಂತೋಷದ

ಆಲಿಂಗನದಲ್ಲಿ ಸುಖವಿದೆ


ಅಶೋಕನ ಚೈತನ್ಯ ಬೆಳೆಯಲು ಬೇಕಿದೆ

 ಒಲವ ಆಸರೆ

ನೀನಿರದೆ ಸನಿಹದಲಿ ಒಂಟಿ ಪಯಣಿಗನು 

ನೌಕೆಯಲ್ಲಿ ಮೌನವಿದೆ


*ಅಶೋಕ ಬೇಳಂಜೆ*

Image Description

Post a Comment

0 Comments