* ದೊರೆತ ಭಾಗ್ಯ*

 *ದೊರೆತ ಭಾಗ್ಯ*



ಬರಹದಿಂದ ದೊರೆತ ಸ್ನೇಹ 

ಆನಂದದ ಕಣ್ಣೀರ ತರಿಸಿತು...

ಕವನದಲಿ ಮೂಡಿದಕ್ಷರವು

ಪ್ರೇಮದ ಪನ್ನೀರು  ಸುರಿಸಿತು 


ಬತ್ತುತಿಹ ಭಾವನೆಗಳು 

ಚಿಗುರೊಡೆದು ಗರಿಗೆದರಿತೊ..

ದಿನವೂ ಬರೆದ ಕವಿತೆಗಳು

ಜೀವ ತುಂಬಿ ಕುಣಿಸಿತೊ...


ಪುಟ್ಟದೊಂದು ಚುಕ್ಕಿ ಕೂಡ

ಬೆಟ್ಟದಷ್ಟು ಖುಷಿಯ ನೀಡಿತು

ಅಕ್ಷರ ಅಕ್ಷರವು ಮಾತಾಡುತಾ

ಶುಭಯೋಗವು ಕೂಡಿ ಬಂದಿತು


ಬಾಳ ಪಯಣಕೆ ಜೋಡಿಯಾಗಲು

ಹೃದಯಗಳೆರಡು ಹಂಬಲಿಸಿತೊ...

ದಿನಗಳುರುಳಿ ವರುಷದೊಳಗೆ

ಕೊರಳಲ್ಲಿ ತಾಳಿ ನಲಿಯಿತೊ...


*ಅಶೋಕ ಬೇಳಂಜೆ*

Image Description

Post a Comment

0 Comments