ಬಾಗೆನಾಡಿನ ಸಾಹಿತ್ಯದ ಆದಿತ್ಯ ಕವಿ ರಾಜಾದಿತ್ಯ ನಮ್ಮ ಹೆಮ್ಮೆ : ಸಂತೋಷ ತಮದಡ್ಡಿ
ರಾಯಬಾಗ
ಬಾಗೆನಾಡಿನ ಸಾಹಿತ್ಯದ ಆದಿತ್ಯ ಕವಿ ರಾಜಾದಿತ್ಯ ಕನ್ನಡ ನಾಡಿನ ಮೊದಲ ಗಣಿತ ಕವಿ ಎಂಬುದು ನಮ್ಮ ಹೆಮ್ಮೆಯೆಂದು ಸಾಧಕ ಶಿರೋಮಣಿ, ಸಮಾಜ ಚಿಂತಕ ಸಂತೋಷ ತಮದಡ್ಡಿ ಹೇಳಿದರು. ಅವರು ರಾಯಬಾಗ ಕನ್ನಡ ಸಾಹಿತ್ಯ ಪರಿಷತ್ತಿನವರು ರಾಯಬಾಗ ತಾಲೂಕಿನ ಹಾರೂಗೇರಿಯ ವಿದ್ಯಾಗಂಗಾ ಪ್ರೌಢ ಶಾಲೆಯಲ್ಲಿ ಆಯೋಜಿಸಿದ ಕನ್ನಡ ಜಾಗೃತಿ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಮಾತನಾಡುತ್ತ ಕವಿ ರಾಜಾದಿತ್ಯ ವ್ಯವಹಾರ ಗಣಿತ ಹೊತ್ತಿಗೆಯಲ್ಲಿ ಬಾಗೆನಾಡಿನ ವರ್ಣನೆಯನ್ನು ಹೃದಯ ಚುಂಬಿಸುವಂತೆ ಮಾಡಿರುವುದು ಸಾಹಿತ್ಯ ಅಭಿರುಚಿಗೆ ಅಭಿಮಾನಕ್ಕೆ ನಿದರ್ಶನವಾಗಿದೆ. ರಾಮಾನುಜನ್ ಅವರು ಸಂಖ್ಯೆಗಳ ಗೆಳೆಯ ಎಂದು ಜನಜನಿತರಾಗಿದ್ದರು. ಅವರು ಗಣಿತದ ನಿಜ ಬ್ರಹ್ಮ ಆಗಿದ್ದರೆಂದು ಅರುಹಿದರು.
ಅತಿಥಿಗಳಾಗಿ ಆಗಮಿಸಿದ್ದ ಅಪರೂಪದ ನಿರೂಪಕ,ಶ್ರೇಷ್ಠ ವಾಗ್ಮಿ ಭೀಮರಾವ್ ಘಂಟಿ (ಪಾಟೀಲ ) ಮಾತನಾಡಿ ಕನ್ನಡದ ಮಣ್ಣು ಆನಂದದ ಅನನ್ಯ ಗಿಣ್ಣು. ಈ ಮಣ್ಣಿನಲ್ಲಿ ಉದಯಿಸಿದ ಶರಣರು,ದಾಸರು,ಸಂತ ಮಹಂತರು,ಕವಿ ಪುಂಗವರಿಂದ ನಾಡು ಸಿರಿವಂತ ಆಗಿದೆ. ಅವರ ವಾರಸುದಾರರು ನಾವಾಗಬೇಕೆಂದು ಆಶಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ರವೀಂದ್ರ ಪಾಟೀಲ ಪ್ರಾಸ್ತಾವಿಕ ನುಡಿಯಾಡುತ್ತ ನಾಡು ನುಡಿಯ ಸೌಂದರ್ಯ ಮಾಧುರ್ಯಗಳನ್ನು ಬಿತ್ತರಿಸಿದರು.
ಪ್ರಾಚಾರ್ಯ ಎಲ್. ಬಿ. ಬಿ. ಪಾಟೀಲ ಅಧ್ಯಕ್ಷತೆ ವಹಿಸಿಕೊಂಡಿದ್ದರು.
ಬೀರದೇವ ಬೀಳಗಿ,ಗೋಪಾಲ ಜಾಧವ, ಮಹದೇವ ಆಂಟಿನ, ರಾವಸಾಬ ದೊಡಮನಿ ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾ ಮಸ್ಕಿ ಸ್ವಾಗತಿಸಿದರು.ಮಹಾನಂದಾ ಹಳ್ಳೂರೆ ನಿರೂಪಿಸಿದರು.ಎಲ್. ಬಿ. ಘಂಟಿ ಶರಣು ಸಮರ್ಪಿಸಿದರು.
ವರದಿ : ವಿಲಾಸ್ ಕಾಂಬಳೆ
ಕನ್ನಡ ಉಪನ್ಯಾಸಕರು
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments