* ರಾಜ್ಯ ಮಟ್ಟದ ಸಂಕ್ರಾಂತಿ ಕವನ ಸ್ಪರ್ಧೆ : ಕಲಬುರಗಿಯ ಡಾ. ಶಿಲಾಸೂ ಪ್ರಥಮ *

 ರಾಜ್ಯ ಮಟ್ಟದ ಸಂಕ್ರಾಂತಿ ಕವನ ಸ್ಪರ್ಧೆ : ಕಲಬುರಗಿಯ ಡಾ. ಶಿಲಾಸೂ ಪ್ರಥಮ

         


ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ನಾಡಿನ ಸಂಕ್ರಾಂತಿ ಹಬ್ಬ ಮತ್ತು ಸಂಸ್ಥೆಯ ೩೫ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ "ಸಂಕ್ರಾಂತಿ ಕಾವ್ಯ ಸಂಭ್ರಮ" ರಾಜ್ಯ ಮಟ್ಟದ ಉಚಿತ ಕವನ ರಚನೆ ಸ್ಪರ್ಧೆಯಲ್ಲಿ ಕಲಬುರಗಿಯ ಡಾ. ಶಿವಕುಮಾರ. ಲಾ. ಸೂರ್ಯವಂಶ, ಇವರು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. 


ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಡಾ. ಶಿವಕುಮಾರ. ಲಾ. ಸೂರ್ಯವಂಶ ಇವರು ತಮ್ಮ ಬರಹದಲ್ಲಿ ಕ್ರೀಯಾಶೀಲರಾಗಿದ್ದು, ಇವರ ಸಾಹಿತ್ಯ ಜೀವನದ ಮುಂದಿನ ದಿನಮಾನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ, ರಾಜ್ಯ, ರಾಷ್ಟ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲೆಂದು ಶುಭ ಹಾರೈಸಿ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗಿದೆ ಎಂದು, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಶ್ರೀ, ಸಾಲಿಗ್ರಾಮ ಗಣೇಶ್ ಶೆಣೈ, ಅಧ್ಯಕ್ಷರಾದ ಶ್ರೀ, ಕೆ. ಎಚ್. ಮಂಜುನಾಥ, ತೀರ್ಪುಗಾರರಾದ ಸಾಹಿತಿ ಮತ್ತು ಕವಯತ್ರಿ ಶ್ರೀಮತಿ, ಅನ್ನಪೂರ್ಣ ಪಾಟೀಲ್ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀ, ಕೆ. ಸಿ. 

ಉಮೇಶ್ ತಿಳಿಸಿದ್ದಾರೆ. ಇಂಥ ಸೃಜನಶೀಲ ಮತ್ತು ಉತ್ತಮ ಬರಹಗಾರರನ್ನು ಈ ಸಮಾಜ ಇನ್ನಷ್ಟು ಗೌರವಿಸಬೇಕಾಗಿದೆ.


ವರದಿ : ಡಾ. ವಿಲಾಸ್ ಕಾಂಬಳೆ 

ಕನ್ನಡ ಉಪನ್ಯಾಸಕರು 

ಬೆಳಗಾವಿ

Image Description

Post a Comment

0 Comments