ಹಿಡಕಲ್ : ಶಿಕ್ಷಣ ಪ್ರಸಾರಕ ಮಂಡಳ ರಾಯಭಾಗ ವಸಂತರಾವ ಪಾಟೀಲ ಸಂಯುಕ್ತ ಪದವಿ ಪೂರ್ವ ಹಾಗೂ ಪ್ರತಿಭಾ ಬಾಲಿಕೀಯರ ಪ್ರೌಢಶಾಲೆ ಹಾಗೂ ವಸಂತ ರಾವಪಾಟೀಲ ಪ್ರಥಮ ದರ್ಜೆ ಮಹಾವಿದ್ಯಾಲಯ ಹಿಡಕಲ್ ಇವುಗಳ ಸಂಯುಕ್ತ ಆಶ್ರಯದಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು. ಸಮಾರಂಭದ ಘನ ಅಧ್ಯಕ್ಷತೆಯನ್ನು ವಹಿಸಿಕೊಂಡ ಸಂಸ್ಥೆಯ ಚೇರ್ಮನರಾದ ಬ್ಯಾರಿಸ್ಟರ್ ಅಮರಸಿಂಹ ವ ಪಾಟೀಲ ಧ್ವಜಾರೋಹಣ ನೆರವೇರಿಸಿ ಕೊಟ್ಟರು. ಮುಖ್ಯ ಅತಿಥಿಗಳಾಗಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಸಾಹಿತಿ ಟಿ ಎಸ್ ಒಂಟಗೂಡಿ ಮಾತನಾಡಿ 1950ರ ಜನೆವರಿ 26ರಂದು ಭಾರತದ ಸಂವಿಧಾನ ಜಾರಿಗೆ ಬಂದ ಐತಿಹಾಸಿಕ ದಿನದ ವಿಶೇಷ ಮಹತ್ವ ಈ ಬಾರಿಯ ಗಣರಾಜ್ಯ ದಿನಕ್ಕಿದೆ. ಸಂವಿಧಾನ ಶಿಲ್ಪಿ ಭಾರತರತ್ನ ಡಾ ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನವನ್ನು ಕಟ್ಟಿಕೊಡುವುದರ ಮೂಲಕ ಪ್ರತಿಯೊಬ್ಬರಿಗೂ ಮತದಾನದ ಹಕ್ಕನ್ನು ಹಾಗೂ ಅಸ್ಪ್ರಶ್ಯತೆಯನ್ನು ತೊಲಗಿಸಿ ಸರ್ವರಲ್ಲಿ ಸಮಾನತೆಯನ್ನು ತಂದುಕೊಡಲು ಪರಿಶ್ರಮಿಸಿದ ಸಮಾನತೆಯ ಸೂರ್ಯ ಡಾ ಬಿ ಆರ್ ಅಂಬೇಡ್ಕರ್ ಅವರ ತತ್ವ ಹಾಗೂ ಆದರ್ಶಗಳು ವಿಶ್ವಕ್ಕೆ ದಾರಿದೀಪವಾಗಲಿ, ಕತ್ತಲೆ ಲೋಕದ ಜನಕೋಟಿ ನೇತಾರ ನೊಂದವರ ಮನಮಿಡಿದ ಹೋರಾಟಗಾರ ಡಾ ಬಿ ಆರ್ ಅಂಬೇಡ್ಕರ್ ರವರು ಶಿಕ್ಷಣ ಸಂಘಟನೆ ಹೋರಾಟ ಎಂದು ಕರೆ ನೀಡಿದ್ದಾರೆ.
ಶಿಕ್ಷಣವು ಹುಲಿಯ ಹಾಲು ಇದ್ದಂತೆ ಅದನ್ನು ಕುಡಿದವರು ಗರ್ಜಿಸಲೇಬೇಕು ಪ್ರತಿಯೊಬ್ಬರು ಶಿಕ್ಷಣ ಪಡೆದು ಜ್ಞಾನದ ರತ್ನಗಳಾಗಬೇಕೆಂದು
ಕರೆ ನೀಡಿದ ಅಂಬೇಡ್ಕರ್ ಅವರ ತತ್ವವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕೆಂದು ಪ್ರಾಚಾರ್ಯ ಸಾಹಿತಿ ಟಿ ಎಸ್ ಒಂಟಗೂಡಿ ಅಭಿಮತ ವ್ಯಕ್ತಪಡಿಸಿದರು. ವೇದಿಕೆಯ ಮೇಲೆ ಪಿಯು ಕಾಲೇಜಿನ ಪ್ರಾಚಾರ್ಯ ಆರ್ ಎಸ್ ತಳವಾರ, ಉಪ ಪ್ರಾಚಾರ್ಯ ಜಿನೇಂದ್ರ ನೀಲಜಿಗಿ,ಪ್ರತಿಭಾ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ರಾಜಶ್ರೀ ಹಣಬರ,ದೈಹಿಕ ಶಿಕ್ಷಕ ಲೋಕೇಶ್ ಪಾಟೀಲ ಉಪಸ್ಥಿತರಿದ್ದರು.
ಪ್ರೊ ಆರ್ ಟಿ ಮಾಳಿ ಸ್ವಾಗತಿಸಿ,ನಿರೂಪಿಸಿದರು.ಎಸ್ ಎಲ್ ಪಾಟೀಲ ವಂದಿಸಿದರು.
ವರದಿ : ಡಾ. ವಿಲಾಸ್ ಕಾಂಬಳೆ
ಕನ್ನಡ ಉಪನ್ಯಾಸಕರು
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments