ಹಳ್ಳಿಹಾದಿಯಲ್ಲಿ ಬರೆದ ಕವಿತೆ, ದಿಲ್ಲಿಗೂ ಹಾಡಾಗಿ ಹಬ್ಬಿತು.."


 "ಹಳ್ಳಿಹಾದಿಯಲ್ಲಿ ಬರೆದ ಕವಿತೆ, ದಿಲ್ಲಿಗೂ ಹಾಡಾಗಿ ಹಬ್ಬಿತು.."


ಮೊನ್ನೆ ಜನವರಿ 26 ರ ಬೆಳಿಗ್ಗೆ ಹಾರೋಗೇರಿಯ ’ಗಂಗರಾಮೋತ್ಸವದಲ್ಲಿ’ ರಾಜ್ಯಮಟ್ಟದ ಅಜೂರ ಪುಸ್ತಕ ಪ್ರಶಸ್ತಿ ಸ್ವೀಕರಿಸಲು ನಸುಕಿನಲ್ಲಿ 4 ಗಂಟೆಗೆ ಕಾರಿನಲ್ಲಿ ಕೈಗಾದಿಂದ ಹೊರಟೆವು. ಕಾನನ ಮಾರ್ಗದಲ್ಲಿ ಹಳ್ಳಿ-ಕೊಳ್ಳಗಳ ನಡುವೆ ಸಾಗುವಾಗ ಗಣರಾಜ್ಯೋತ್ಸವದ ಕವಿತೆ ಬರೆದು,  ಬೆಳಗಾವಿ ತಲುಪಿದ ಮೇಲೆ, ತಿಂಡಿಗೆಂದು ಇಳಿದಾಗ ಹೋಟೇಲಿನಲ್ಲಿ ವಾಟ್ಸಾಪು, ಮುಖಪುಸ್ತಕದಲ್ಲಿ ಪೋಸ್ಟ್ ಮಾಡಿದ್ದೆ. ನಂತರ ಪ್ರಯಾಣ ಹಾಗೂ ಸಮಾರಂಭದಲ್ಲಿ ಪಾಲ್ಗೊಂಡು ಮೊಬೈಲು ನೋಡಿರಲಿಲ್ಲ.


ರಾತ್ರಿ ಹತ್ತಕ್ಕೆ ಮರಳಿ ಮನೆ ತಲುಪಿದ ಮೇಲೆ, ಮೊಬೈಲು ತೆರೆದರೆ, ನನ್ನ ಗಣರಾಜ್ಯೋತ್ಸವ ಕವಿತೆ, ದೇಶಭಕ್ತಿ ಸಂಚಲನದ ಮಧು-ಮಧುರಗೀತೆಯಾಗಿ, ಆಕರ್ಷಕ ದೃಶ್ಯಕಾವ್ಯವಾಗಿ ದೇಶದ ಉದ್ದಗಲಕ್ಕೂ ಹರಿದಿತ್ತು. ಅನಾಮಿಕ ಅಕ್ಷರಬಂಧು ಶ್ರೀ Sarpanand k Hongal ಅವರು ಆ ಕವಿತೆಯನ್ನು ತಮ್ಮ ಅತ್ಯದ್ಭುತ ತಾಂತ್ರಿಕ ಕೌಶಲ್ಯದಿಂದ, ಮನಮೋಹಕ ಸಂಕಲನದಿಂದ ಅನನ್ಯ ದೃಶ್ಯಗೀತೆಯಾಗಿ ಮಾಡಿ, ಅಂತರ್ಜಾಲದಲ್ಲಿ ದೇಶಭಕ್ತಿ ತರಂಗಗಳ ಅನುರಣಿಸುವಂತೆ ಮಾಡಿದ್ದರು. ಅವರ ಅನನ್ಯ ಪ್ರತಿಭೆಗೆ, ಅಕ್ಕರೆ ಅಂತಃಕರಣಕ್ಕೆ, ಅನಂತ ಅಕ್ಷರಪ್ರೀತಿಗೆ ನಾನು ಆಭಾರಿ.


ಅವರ ಕರಕೌಶಲ್ಯ ಮೋಡಿಯ ದೃಶ್ಯಕಾವ್ಯ ಗಾರುಡಿಯನ್ನು ನಿಮ್ಮ ಅಂಗೈಲಿಡುತ್ತಿದ್ದೇನೆ. ನೋಡಿ ಹಾರೈಸಿ ಹರಸಿ ಬಿಡಿ. ತಾಯಿ ಭಾರತಿಗೆ ಜಯಘೋಶ ಅರ್ಪಿಸಿಬಿಡಿ." - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments