ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಹೇಮಾ ಚೌಗಲಾ ಪ್ರಥಮ
ರಾಯಬಾಗ
76 ನೆಯ ಗಣರಾಜ್ಯೋತ್ಸವದ ಅಂಗವಾಗಿ ಅಥಣಿ ತಾಲೂಕು ಆಡಳಿತದವರು ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಿದ್ದರು.ಚಿಕ್ಕೂಡ ಸರಕಾರಿ ಪ್ರೌಢ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಹೇಮಾ ರಾಜೇಂದ್ರ ಚೌಗಲಾ "ನಮ್ಮ ದೇಶ ನಮ್ಮ ಸಂವಿದಾನದ ಮಹತ್ವ " ವಿಷಯ ಕುರಿತು ಆಕರ್ಷಕವಾಗಿ ವಿಷಯ ಪ್ರಸ್ತುತಪಡಿಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಕರ್ನಾಟಕ ರಾಜ್ಯದ ಮಾಜಿ ಉಪಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಅವರಿಂದ ಸನ್ಮಾನಗೊಂಡು ಪ್ರಶಸ್ತಿ ಪತ್ರ ಪಡೆದುಕೊಂಡಿದ್ದಾಳೆಂದು ಶಿಕ್ಷಕ ಎಸ್. ಎಸ್. ಕಾಂಬಳೆ ತಿಳಿಸಿದ್ದಾರೆ.ಶಾಲೆಯ ಕೀರ್ತಿ ಹೆಚ್ಚಿಸಿರುವ 'ಸುವರ್ಣ ಬಾಲಕಿ' ಹೇಮಾಳನ್ನು ಎಸ್. ಡಿ. ಎಮ್. ಸಿ ಅಧ್ಯಕ್ಷ ಲಕ್ಷ್ಮಣ ಪಾಟೀಲ, ಸದಸ್ಯರು, ಮುಖ್ಯ ಉಪಾಧ್ಯಾಯ ರವೀಂದ್ರ ಪಾಟೀಲ, ಶ್ರೀಕಾಂತ ಕಂಬಾರ, ಶಂಕರ ಕಾಂಬಳೆ, ಶ್ರೀಕಾಂತ ಹಳ್ಳೂರ, ಮಹಾದೇವ ಕಳ್ಳಿಗುದ್ದಿ, ಪಾರೀಸ ಬಳೋಜ, ಸುಮಿತ್ರಾ ಮಗೆಣ್ಣವರ,ಜ್ಯೋತಿ ಮಹಾಬಳಶೆಟ್ಟಿ,ಎಲ್. ಎಸ್. ಮಗದುಮ್ಮ, ಹಿರಿಯರು, ಜನಪ್ರತಿನಿಧಿಗಳು, ಯುವಕರು,ಹಳೆಯ ವಿದ್ಯಾರ್ಥಿಗಳು, ಶಾಲಾ ಸಂಸತ್ ಸದಸ್ಯರು, ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿ ತುಂಬು ಹೃದಯದಿಂದ ಅಭಿನಂದಿಸಿದ್ದಾರೆ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments