"ಅಕ್ಕರೆಯ ಅಕ್ಷರಬಂಧುಗಳಿಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಇದು ತಾಯಿ ಭಾರತಿಗೆ ನಮ್ಮ ನಿಮ್ಮದೇ ಅಂತರಂಗದಿಂದ ಅರ್ಪಿಸಿದ ಕವನದಾರತಿ" -ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಭಾರತಿಗೆ ಕವನದಾರತಿ.!
ಶತ ಶತಮಾನಗಳ ಭವ್ಯೇತಿಹಾಸ
ಸುಸಂಸ್ಕøತಿ ಸಂಸ್ಕಾರಗಳ ಆವಾಸ
ಶಾಂತಿ ಪ್ರೀತಿಗಳ ಹೊಳೆವ ಹಾಸ
ಜಗಕೆಲ್ಲ ಬೆಳಕಿನ ಭಕುತಿ ವಿಶ್ವಾಸ
ಶರಣು ಶರಣು ತಾಯಿಯೆ ನಿನಗೆ
ವಿಧ ವಿಧವಾದರು ಉಡುಗೆ ತೊಡುಗೆ
ಭಾವದ ಏಕತೆ ಮಿನುಗಿದೆ ಅಡಿಗಡಿಗೆ
ಬಗೆ ಬಗೆಯಾದರು ಭಾಷೆಯ ನಡಿಗೆ
ಬೆಸೆದಿದೆ ದೇಶದ ಬಾಂಧವ್ಯದ ಬೆಸುಗೆ
ಜಯ ಜಯವೆಂದೆ ಮಾತೆಯೆ ನಿನಗೆ
ನೂರೆಂಟಿದ್ದರು ಜಾತಿ ಧರ್ಮದ ಭಿನ್ನತೆ
ಎಲ್ಲರ ಎದೆಯಲಿ ಒಂದೇ ಭಾವದ ಒರತೆ
ಸಾವಿರವಿದ್ದರು ಅಂತರಗಳ ತಾರತಮ್ಯತೆ
ಹಾಡುವುದೊಂದೆ ಜನಗಣ ರಾಷ್ಟ್ರದ ಗೀತೆ
ನಮೊ ನಮೊ ಎಂದೆ ಭಾರತಿಯೆ ನಿನಗೆ.!
ದಿಗ್ದಿಗಂತಗಳಲಿ ಹಾರುತಿದೆ ತ್ರಿವರ್ಣ ತಿರಂಗ
ಏರಿದೆ ಸಕಲ ರಂಗದಲೂ ಸಾಧನೆಯ ಶೃಂಗ
ವಿಶ್ವಶಾಂತಿ ಸೌಹಾರ್ದತೆ ಝೇಂಕರಿಸಿದೆ ಭೃಂಗ
ಕೋಂಡಾಡುತಿದೆ ತಾಯಿ ನಿನ್ನ ಜಗದಂತರಂಗ
ಕರಮುಗಿದು ನಮಿಸುತಿದೆ ತಾಯಿ ನಿನಗೆ.!
ಸರ್ವರ ಎದೆಯಲಿ ದೇಶಭಕ್ತಿ ಧ್ಯೇಯ ಪ್ರೀತಿ
ಕನಸು ಮನಸಲಿ ಕಾಣುವುದೊಂದೆ ರಾಷ್ಟ್ರಪ್ರಗತಿ
ನಡ-ನುಡಿಯಲಿ ನಿತ್ಯವೂ ಭಾವೈಕ್ಯತೆ ನೀತಿ
ಭಾರತಿಯ ಮಕ್ಕಳು ನಾವೆಂಬ ಹೆಮ್ಮೆ ಕೀರ್ತಿ
ತಾಯಿ ನಿನಗಿಧೋ ಗಣತಂತ್ರದ ಕವನದಾರತಿ.!
ಎ.ಎನ್.ರಮೇಶ್. ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments