ಮನದನ್ನೆ.

 ಮನದನ್ನೆ.



ಎಲ್ಲಿ ನಿನ್ನ ಮುಖವು,

ಕಾಣದಾಯಿತ್ತು,

ಮನವು ನನ್ಂದು ನೊಂದಿತ್ತು.


ನಿನ್ನ ಮನದ ಅಂಗಳದಲ್ಲಿ

ನನ್ನ ಹೆಸರು ಮಾಸಿಹೋಗಿ

ಅನ್ಯರ ಹೆಸರು ಬಂದಿತ್ತೆ.


ಬೆರತು ನಡಿದಾಡಿದ,

ನೆಲದ ಸ್ಥಳವು ಮರೆತು,

ಅನ್ಯ ಜಾಗವು ಬಂದಿತೆ,


ನಿನ್ನ ನುಡಿಯು ಹೖದಯವ,

ಸೀಳಿ ನೋವಿನ ತೋರಣವ,

ಕಟ್ಟಿ ಮರೆದು ನಿಂದಿತೆ.


ನರ ನಾಡಿಗಯಳು ಬಿಗಿದು,

ಪ್ರಾಣ ಪಕ್ಷೀ ನನ್ನಿಂದ ಜಿಗಿದು,

ಹಾರುವಾಗ ಮನದನ್ನೆ ಎಂದಿದೆ


ಮುತ್ತೂರು ಪುರುಷೋತ್ತಮ್,

ಗೌರಿಬಿದನುರು.

Image Description

Post a Comment

0 Comments