‘ಆತ್ಮಾನುಸಂಧಾನ’ ಕವನ ಸಂಕಲನಕ್ಕೆ 2024-2025 ನೇ ರಾಜ್ಯ ಮಟ್ಟದ ಸಾಲಿನ ಆಜೂರ ಪ್ರತಿಷ್ಠಾನದ ವರ್ಷದ ಅತ್ಯುತ್ತಮ ಪುಸ್ತಕ (ಕವನ ಸಂಕಲನ) ಪ್ರಶಸ್ತಿ

 “ಆತ್ಮಾನುಸಂಧಾನಕ್ಕೆ ರಾಜ್ಯಮಟ್ಟದ ಆಜೂರ ಪ್ರಶಸ್ತಿ” - ಹಾರೈಸಲು ಬನ್ನಿ..


ನನ್ನ ‘ಆತ್ಮಾನುಸಂಧಾನ’ ಕವನ ಸಂಕಲನಕ್ಕೆ 2024-2025 ನೇ ರಾಜ್ಯ ಮಟ್ಟದ ಸಾಲಿನ ಆಜೂರ ಪ್ರತಿಷ್ಠಾನದ ವರ್ಷದ ಅತ್ಯುತ್ತಮ ಪುಸ್ತಕ (ಕವನ ಸಂಕಲನ) ಪ್ರಶಸ್ತಿ


ಲಭಿಸಿದೆ. ಇದೇ ಭಾನುವಾರ 26.01.25 ರ ಬೆಳಿಗ್ಗೆ 10.00 ಕ್ಕೆ ಬೆಳಗಾವಿ ಜಿಲ್ಲೆಯ ಹಾರೂಗೇರಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ. ಬನ್ನಿ ‘ಆತ್ಮಾನುಸಂಧಾನದ’ ಪ್ರಶಸ್ತಿ ಸಂಭ್ರಮದ ಆನಂದಾನುಭೂತಿಯಲ್ಲಿ ಭಾಗಿಯಾಗಿ. ಶ್ರೀ ಬಸವರಾಜ್ ಅಜೂರ ಸಾರಥ್ಯದ ಪ್ರಶಸ್ತಿ ಪ್ರದಾನ ಸಮಾರಂಭದ ಯಶಸ್ಸಿಗೆ ಜೊತೆಯಾಗಿ. 


ಅಕ್ಷರಬಂಧುಗಳೇ ‘ಆತ್ಮಾನುಸಂಧಾನ’ ವೆಂದರೆ ನನ್ನ ಕವಿತೆಗಳೊಂದಿಗಿನ ನಿಮ್ಮ ಭಾವಾನುಸಂಧಾನ. ಹಾಗಾಗಿ ಇದು ನಿಮ್ಮದೇ ಸಂಕಲನ. ಆದ್ದರಿಂದ ಅತ್ಯವಶ್ಯ ನಿಮ್ಮ ಆಗಮನ” - ಪ್ರೀತಿಯಿಂದ ನಿಮ್ಮ ನಿರೀಕ್ಷೆಯಲ್ಲಿ ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments