ಸಾವಿರಾರು ಬಡ ಕುಟುಂಬಗಳ ಆಶ್ರಯ ದಾತ ಪಿ.ಬಿ ಪಾಟೀಲ : ಐ.ಪಿ.ಪಾಟೀಲ್ ಬಣ್ಣನೆ
ಚಿಕ್ಕೋಡಿ: ಈ ಲೋಕದಲ್ಲಿ ಒಬ್ಬ ಮನುಷ್ಯ ಹುಟ್ಟುತ್ತಾನೆ ಮತ್ತು ಸಾಯುತ್ತಾನೆ. ಹುಟ್ಟು ಮತ್ತು ಸಾವುಗಳ ನಡುವೆ ಹತ್ತಾರು ಜನರ ಬಾಯಲ್ಲಿ ಅವರ ಹೆಸರು ಶಾಶ್ವತವಾಗಿ ಉಳಿದುಕೊಳ್ಳಬೇಕು. ಈ ನೆಲೆಯಲ್ಲಿ ಸಾವಿರಾರು ಬಡ ಕುಟುಂಬಗಳ ಆಶ್ರಯ ದಾತ ಆಗಿದ್ದವರು ಪ್ರಶಾಂತ ಬಾಳಗೌಡ ಪಾಟೀಲ ಎಂದು ಲಠ್ಠೆ ಶಿಕ್ಷಣ ಸಂಸ್ಥೆಯ ಶ್ರೀಮತಿ ಕುಸುಮಾವತಿ ಮಿರಜಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸ್ಥಳೀಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಇಂದ್ರಜಿತ್ ಪಾಟೀಲ್ ಅವರು ಬಣ್ಣಿಸಿದರು.
ಚಿಕ್ಕೋಡಿ ತಾಲೂಕಿನ ಬೇಡಿಕಿಹಾಳ ಮತ್ತು ಶಮನೇವಾಡಿಯ ಲಠ್ಠೆ ಶಿಕ್ಷಣ ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳು ಆಯೋಜಿಸಿದ ಶ್ರೀ ಪ್ರಶಾಂತ ಬಾಳಗೌಡ ಪಾಟೀಲ ಅವರ ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಪಾಟೀಲ್ ಅವರು ಜೈನ ದಿಗಂಬರ ಸಮುದಾಯದ ಅತ್ಯಂತ ಪ್ರಮುಖ ಸಮಾಜಸೇವಕರಾಗಿದ್ದರು. ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ನೋಂದವರಿಗೆ ಆಶ್ರಯದತರಾಗಿದ್ದರು. ಸರ್ವ ಜನಾಂಗದ ಏಳಿಗೆಗಾಗಿ ನಿರಂತರವಾಗಿ ದುಡಿದ ಬೇಡಕಿಹಾಳದ ಕಣ್ಮಣಿ ಎಂದು ಗುಣಗಾನ ಮಾಡಿದರು.
ನಂತರ ಮಾತನಾಡಿದ ಉಪಾಧ್ಯಕ್ಷರಾದ ಶ್ರೀ ಜಯಕುಮಾರ್ ಖೋತ ಅವರು ಪಾಟೀಲ್ ಅವರ ಶಿಕ್ಷಣ ಪ್ರೇಮ ಹಾಗು ಸರಳ ಸ್ವಭಾವದ ವ್ಯಕ್ತಿತ್ವವನ್ನು ಒಳ್ಳೆಯ ಗುಣವನ್ನು ಬಣ್ಣಿಸಿದರು. ಯಾವುದೇ ಸಮಾಜದ ವ್ಯಕ್ತಿಯು ಕಷ್ಟ ಎಂದು ಅವರ ಬಳಿಗೆ ಹೋಗಿ ಮನವಿ ಮಾಡಿಕೊಂಡರೆ ತಕ್ಷಣದಲ್ಲಿ ಸ್ಪಂದಿಸುವ ಮನೋಭಾವವನ್ನು ಪಾಟೀಲ ಅವರು ಹೊಂದಿದ್ದರು. ಇವರ ಚಿಂತನೆಗಳು ನಮಗೆ ಯಾವಾಗಲೂ ಮಾರ್ಗದರ್ಶನವಾಗಿವೆ ಎಂದು ಸಂತಾಪ ಸಭೆಯಲ್ಲಿ ತಿಳಿಸಿದರು.
ಮಲಗೌಡ ಪಾಟೀಲ್ ಮಾತನಾಡುತ್ತಾ ಹುಟ್ಟು ಆಕಸ್ಮಿಕ ಸಾವು ಶಾಶ್ವತ. ಇವುಗಳ ನಡುವೆ ತಾನು ಸಂಪಾದನೆ ಮಾಡಿದ ಸಾಧನೆ ಮತ್ತು ಹಣದಿಂದ ನೊಂದವರಿಗೆ ಸಹಾಯ ಹಸ್ತ ಮಾಡುವ ಗುಣವನ್ನು ಪಾಟೀಲ್ ಅವರು ಹೊಂದಿದ್ದರು ಎಂದು ಬಣ್ಣಿಸಿದರು. ವಿಫುಲ ಸದಲಿಗೆ ಮಾತನಾಡುತ್ತಾ ಪಾಟೀಲ್ ಅವರು ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಒಳ್ಳೆಯ ಹೆಸರು ಪಡೆದಿದ್ದರು. ಜೊತೆಗೆ ಆಚಾರ್ಯ ದೇಶಭೂಷಣ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಶೈಕ್ಷಣಿಕ ಪ್ರಗತಿಗೆ ನಿರಂತರವಾಗಿ ಶ್ರಮಿಸಿದ ವ್ಯಕ್ತಿತ್ವ ಪ್ರಶಾಂತ್ ಅವರದು ಎಂದು ಕಂಬನಿ ಮಿಡಿದರು.
ಇದೇ ಸಂದರ್ಭದಲ್ಲಿ ಭಾವಪೂರ್ಣ ಶ್ರದ್ಧಾಂಜಲಿಯ ನಿಮಿತ್ತ ರಾಮಚಂದ್ರ, ಬಾಳ ಸಾಹೇಬ್ ಪಾಟೀಲ್, ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಧೀರಜ್ ಪಾಟೀಲ್, ಪಾಶುಗೌಡ ಪಾಟೀಲ್,ಸೋಮನ್ ಖೋತ್, ಎಂ.ಎಸ್, ಕಟ್ಟಿ ಸಂತಾಪ ನುಡಿಗಳನ್ನು ನುಡಿದರು. ಇದೇ ಸಂದರ್ಭದಲ್ಲಿ ಲಠ್ಠೆ ಶಿಕ್ಷಣ ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪ್ರಾಂಶುಪಾಲರು, ಪ್ರಾಧ್ಯಾಪಕರು, ಉಪನ್ಯಾಸಕರು,ಶಿಕ್ಷಕರು ಹಾಗೂ ಆಡಳಿತ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ : ಡಾ. ವಿಲಾಸ್ ಕಾಂಬಳೆ
ಕನ್ನಡ ಉಪನ್ಯಾಸಕರು
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments