* ನಮಿಸುವೆನು ತಾಯಿ *

 ನಮಿಸುವೆನು ತಾಯಿ 



ಅಮ್ಮ ನಿನ್ನ ಚರಣಕೆ 

ನಮಿಸುವೆನು ನಾನೆಂದಿಗೂ 

ನಿನ್ನ ಪ್ರೀತಿ ತ್ಯಾಗವನ್ನು 

ಕಾಣೆನು ಕೊನೆಯನೆಂದಿಗೂ 


ನಿನ್ನ ಕಂದನಾಗಿ ಹುಟ್ಟಿದ್ದಕ್ಕೆ 

ನನಗೆ ಹೆಮ್ಮೆ ಅಲ್ಲವೇನು!

ಬುದ್ಧ ಗಾಂಧಿ ಬಸವ ವಿವೇಕಾ

ಅಂಬೇಡ್ಕರ ನಿನ್ನ ಮನದ ರೂಪವೇನು!


ಇತಿಹಾಸಕ್ಕೂ ನಿಲುಕದ ಕಾಲ ಕಾಲಕ್ಕೂ

ಘನಕಾಣ್ಕೆ ನೀಡುವ ಕೋಟಿ ಕೋಟಿ 

ಮುತ್ತುಗಳ ಬಿತ್ತಿ ಬೆಳೆವ ಭುವನಮಾತೆ 

ನಿನಗೆ ನನ್ನ ವಂದನೆ ಅಭಿನಂದನೆ


ಅಮ್ಮ ನಿನ್ನ ಕಣ್ಣ ಕಾಂತಿಯಲ್ಲಿ 

ಹೊಳೆವ ಹೊನ್ನ ಕಿರಣವು ಹಲವು 

ರೂಪ ನಿನ್ನ ರೂಪ ನಮ್ಮ ಬದುಕಲಿ 

ನಮೋ ತಾಯಿ ಭುವನೇಶ್ವರಿ ನಿನ್ನ ಚರಣಕೆ 


ಉದಂತ ಶಿವಕುಮಾರ್ 

ಕವಿ ಮತ್ತು ಲೇಖಕ 

ಬೆಂಗಳೂರು -560056

Image Description

Post a Comment

0 Comments